ಪ್ರಧಾನಿ ಮೋದಿ ಅವರ ದಾವೋಸ್ ಭಾಷಣಕ್ಕೆ ಚೀನಾ ಪ್ರಶಂಸೆ

By Suvarna Web DeskFirst Published Jan 25, 2018, 8:22 AM IST
Highlights

ಚೀನಾ, ಅಪರೂಪಕ್ಕೆ ಎಂಬಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಅವರ ಈ ನಿಲುವನ್ನು ಚೀನಾ ಸ್ವಾಗತಿಸಿದೆ.

ಬೀಜಿಂಗ್: ಚೀನಾ, ಅಪರೂಪಕ್ಕೆ ಎಂಬಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಅವರ ಈ ನಿಲುವನ್ನು ಚೀನಾ ಸ್ವಾಗತಿಸಿದೆ.

‘ಮೋದಿ ಅವರು ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿಯಿಂದಾಗುವ ಅಪಾಯದ ಬಗ್ಗೆ ವಿವರಿಸಿದ್ದಾರೆ. ಜಾಗತೀಕರಣ ಇಂದಿನ ಪ್ರವೃತ್ತಿ ಎಂದು ಅವರು ಪ್ರತಿಪಾದಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಎಲ್ಲಾ ದೇಶಗಳು ಆರ್ಥಿಕ ರಕ್ಷಣಾ ನೀತಿಯ ವಿರುದ್ಧ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಭಾರತದೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತದೆ ’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಹುವಾಚುನೈಯಿಂಗ್ ತಿಳಿಸಿದ್ದಾರೆ.

ಜಾಗತೀಕರಣದ ಅತಿದೊಡ್ಡ ಪ್ರಯೋಜನವನ್ನು ಚೀನಾ ಪಡೆದುಕೊಳ್ಳುತ್ತಿದ್ದು, ಕಳೆದ ಮೂರು ದಶಕಗಳಿಂದ ವಿಶ್ವದ ಕಾರ್ಖಾನೆ ಎನಿಸಿಕೊಂಡಿದೆ.

click me!