
ಬೆಂಗಳೂರು (ಜ.25): ಇಂದು ಕರ್ನಾಟಕದಾದ್ಯಂತ ಮಹದಾಯಿಗಾಗಿ ಬಂದ್ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
BMTC, ವೋಲ್ವೋ ಬಸ್ಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಏರ್ಪೋರ್ಟ್ಗೆ ತೆರಳುತ್ತಿರುವ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಬಿಎಂಟಿಸಿ ಬಸ್’ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಹದಾಯಿ ಹೋರಾಟಕ್ಕೆ ಮಾಲ್’ಗಳೂ ಕೂಡ ಬೆಂಬಲ ಸೂಚಿಸಿವೆ - ಮಂತ್ರಿ ಮಾಲ್’ನ್ನೂ ಕೂಡ ಬಂದ್ ಮಾಡಲಾಗಿದೆ. ಮಂತ್ರಿ ಮಾಲ್ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಐಟಿ, ಬಿಟಿ ಕಂಪನಿಗಳಿಗೂ ಕೂಡ ಬಂದ್ ಬಿಸಿ ತಟ್ಟಿದ್ದು, ಮಾನ್ಯತಾ ಟೆಕ್ ಪಾರ್ಕ್’ನಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ. ಭದ್ರತೆ ದೃಷ್ಟಿಯಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.
ಎಂದಿನಂತೆ ಬಿಎಂಟಿಸಿ ನೌಕರರು ಕೆಲಸಕ್ಕೆ ಹಾಜರಾದರೂ ಕೂಡ ಅಧಿಕಾರಿಗಳು ಬಸ್’ಗಳನ್ನು ನೀಡುತ್ತಿಲ್ಲ. ಇನ್ನು ಕೆಎಸ್ಆರ್’ಟಿಸಿಯಿಂದಲೂ ಕೂಡ ಬಂದ್’ಗೆ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಬಸ್’ಗಳ ಸಂಚಾರವಿಲ್ಲವೆಂದು ಪ್ರಯಾಣಿಕರಿಗೆ ಹೇಳುತ್ತಿದ್ದಾರೆ.
ಆದರೆ ಬಂದ್ ನಡೆದರೂ ಕೂಡ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ರೀತಿಯಾದ ವ್ಯತ್ಯಯವಾಗುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.