ಇಂಡೋ-ಪಾಕ್ ಗಡಿಯಿಂದ 90 ಕಿಮೀ ದೂರದಲ್ಲಿ ಚೀನಿ ಸೈನಿಕರು!

Published : Mar 21, 2019, 10:04 PM IST
ಇಂಡೋ-ಪಾಕ್ ಗಡಿಯಿಂದ 90 ಕಿಮೀ ದೂರದಲ್ಲಿ ಚೀನಿ ಸೈನಿಕರು!

ಸಾರಾಂಶ

ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣದ ಲಾಭ ಪಡೆದ ಚೀನಾ| ಭಾರತ-ಪಾಕ್ ಗಡಿಯಿಂದ 90 ಕಿಮೀ ದೂರದಲ್ಲಿ ಚೀನಿ ಸೈನಿಕರು| ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ರಕ್ಷಣೆಗಾಗಿ ಚೀನಾ ಸೈನ್ಯ ದೌಡು| ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಚೀನಿ ಸೈನಿಕರ ಚಲನವಲನ| ಚೀನಿ ಸೈನಿಕರ ಮೇಲೆ ನಿಗಾ ಇಟ್ಟಿರುವ ಭಾರತೀಯ ಸೇನೆ|

ಸಿಂಧ್(ಮಾ.21): ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣದ ಲಾಭ ಪಡೆದಿರುವ ಚೀನಾ, ಉಭಯ ರಾಷ್ಟ್ರಗಳ ಗಡಿಯಿಂದ ಕೇವಲ 90 ಕಿಮೀ ದೂರದಲ್ಲಿ ತನ್ನ ಸೈನಿಕರನ್ನು ನೇಮಿಸಿದೆ.

ಮೂಲಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗಡಿಯಲ್ಲಿ ಚೀನಿ ಸೈನಿಕರು ಠಿಕಾಣಿ ಹೂಡಿದ್ದಾರೆ ಎಂದು ಭಾರತೀಯ ಗುಪ್ತಚರ ವರದಿ ತಿಳಿಸಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ರಕ್ಷಣೆಗೆ ಪೀಪಲ್ಸ್ ಲಿಬರೇಶನ್ ಆರ್ಮಿ ಸಿಂಧ್ ಪ್ರಾಂತ್ಯಕ್ಕೆ ಕಾಲಿಟ್ಟಿದೆ ಎಂದು ಹೇಳಲಾಗಿದೆ.

ಅಲ್ಲದೇ ಸಿಂಧ್ ಪ್ರಾಂತ್ಯದ ಥಾರ್ ನಲ್ಲಿರುವ ತನ್ನ ಕಲ್ಲಿದ್ದಲು ಗಣಿಗಳ ರಕ್ಷಣೆಗಾಗಿ ಸೆನ್ಯ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಆದರೆ ಚೀನಾ ಸೈನ್ಯ ಭಾರತದ ಗಡಿ ಸಮೀಪ ಬಂದಿರುವುದು ಚಿಂತೆಗೆ ಕಾರಣವಾಗಿದ್ದು, ಚೀನಿ ಸೈನಿಕರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!