ಖಾಸಗಿ ಬಸ್ ಅಪಘಾತ: 21 ಮಂದಿ ಬಲಿ, ಹಲವರಿಗೆ ಗಂಭೀರ ಗಾಯ!

By Web Desk  |  First Published Oct 1, 2019, 3:00 PM IST

ಖಾಸಗಿ ಬಸ್ ಅಪಘಾತ, 21 ಮಂದಿ ಸಾವು 50ಕ್ಕೂ ಅಧಿಕ ಮಂದಿಗೆ ಗಾಯ| ನಿಯಂತ್ರಣ ಕಳೆದುಕೊಂಡ ಚಾಲಕ, ಉರುಳಿ ಬಿದ್ದ ಬಸ್| ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ


ಗಾಂಧೀನಗರ[ಅ.01]: ಉತ್ತರ ಗುಜರಾತ್​ನ ಬನಸ್ಕಾಂತ ಬಳಿ 70 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 21 ಮಂದಿ ಸಾವನ್ನಪ್ಪಿರುವ ಘಟನೆ  ಘಟನೆ ಸೋಮವಾರ ನಡೆದಿದೆ.  ಈ ಭೀಕರ ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ಬನಸ್ಕಾಂತ ಜಿಲ್ಲೆಯ ಅಂಬಾಜಿ ನಗರದ, ಅಂಬಾಜಿ ದಾಂತಾ ಮಾರ್ಗದ ಗುಡ್ಡಗಾಡು ರಸ್ತೆಯಾದ ತ್ರಿಶುಲಿಯಾ ಘಾಟ್ ನಲ್ಲಿ ಈ ಭತಯಾನಕ ಅಪಘಾತ ಸಂಭವಿಸಿದೆ. ಅಪಘಾತದ ಕುರಿತು ಮಾಹಿತಿ ನೀಡಿರುವ ಬನಸ್ಕಾಂತ ಜಿಲ್ಲೆಯ ಪೊಲೀಸ್ ಕಮಿಷನರ್ 'ಖಾಸಗಿ ಬಸ್ ನ್ಲಲಿ ಸುಮಾರು 70 ಮಂದಿ ಪ್ರಯಾಣಿಸುತ್ತಿದ್ದರು. ಈ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಸ್ ಉರುಳಿ ಬಿದ್ದಿದೆ' ಎಂದಿದ್ದಾರೆ.

Devastating news from Banaskantha. I am extremely pained by the loss of lives due to an accident. In this hour of grief, my thoughts are with the bereaved families.

The local administration is providing all possible help to the injured. May they recover soon.

— Narendra Modi (@narendramodi)

Tap to resize

Latest Videos

ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. 'ಭೀಕರ ಅಪಘಾತದ ಸುದ್ದಿ ಕೇಳಿ ಆಘಾತವಾಯ್ತು. ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವವ ಕುರಿತು ಬಹಳ ನೋವಾಗಿದೆ. ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಘಟನೆಯಲ್ಲಿ ಗಾಯಗೊಂಡವರಿಗೆ ಎಲ್ಲಾ ಸವಲತ್ತುಗಳನ್ನು ಸ್ಥಳೀಯ ಆಡಳಿತ ಒದಗಿಸಲಿ' ಎಂದಿದ್ದಾರೆ.
 

click me!