
ಬೀಜಿಂಗ್(ಡಿ.2): ಬರೋಬ್ಬರಿ 20 ವರ್ಷಗಳ ಹಿಂದೆ ಅಪರಾ ಎಂದು ಸಾಬೀತಾಗಿ ಮರಣದಂಡನೆ ಗುರಿಯಾದ ವ್ಯಕ್ತಿ ಆರೋಪಿಯೇ ಅಲ್ಲ, ಆತ ನಿರಪರಾಧಿ ಎಂದು ಚೀನಾ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅತ್ಯಾಚಾರ ಹಾಗೂ ಹತ್ಯೆ ಆರೋಪದ ಮೇಲೆ ಶಿಕ್ಷೆಗೊಳಗಾದ 20 ವರ್ಷದ ನೈ ಶುಬಿನ್‌ಗೆ 1995ರಲ್ಲಿ ಗಲ್ಲು ಶಿಕ್ಷೆಯಾಗಿತ್ತು. ಎರಡನೇ ಸರ್ಕ್ಯೂಟ್ ನ್ಯಾಯಾಲಯದಲ್ಲಿ ಸುಪ್ರೀಂ ನ್ಯಾಯಾಧೀಶರ ನೇತ್ತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಶುಬಿನ್ ನಿರಪರಾಧಿ ಎಂಬ ಬದಲಾದ ತೀರ್ಪು ಪ್ರಕಟವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 2005ರಲ್ಲಿ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆಗೈದ ನಿಜವಾದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ತೀರ್ಪಿನ ನಂತರ ಶುಬಿನ್ ಪೋಷಕರು ದುಖಿಃತರಾದ ಭಾವನಾತ್ಮಕ ಘಟನೆಯೂ ನಡೆದಿದೆ ಎಂದು ವರದಿ ಹೇಳಿದೆ. ಕಮ್ಯುನಿಸ್ಟ್ ದೇಶದ ನ್ಯಾಯಾಂಗ ವ್ಯವಸ್ಥೆಯಿಂದ ಇಂಥ ಘಟನೆ ನಡೆದಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.