ಸಚಿವರ ಬಳಿಯಿರುವ ಹಳೆ ನೋಟುಗಳು ಹೇಗೆ ಬದಲಾಗುತ್ತವೆ?

By Suvarna Web DeskFirst Published Dec 2, 2016, 7:04 PM IST
Highlights

ವರ್ಷಾರಂಭದಲ್ಲಿ ಸಲ್ಲಿಸಲಾದ ವಿವರಗಳ ಪ್ರಕಾರ, ಸಚಿವ ಅರುಣ್ ಜೇಟ್ಲಿ ಮತ್ತು ಅವರ ಪತ್ನಿ ತಮ್ಮ ಕೈಯಲ್ಲಿ 75 ಲಕ್ಷ ನಗದು ಇರುವುದಾಗಿ ಘೋಷಿಸಿಕೊಂಡಿದ್ದರು. ಆ ಮೂಲಕ ಕೇಂದ್ರ ಸಚಿವರಲ್ಲೇ ಅತ್ಯಂತ ಶ್ರೀಮಂತ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು

ನವದೆಹಲಿ(ಡಿ.3): ಕಳೆದ 2015-16 ಹಣಕಾಸು ವರ್ಷಕ್ಕೆ ಸಂಬಂಸಿ ಕೇಂದ್ರ ಸಚಿವರು ತಮ್ಮ ಬಳಿಯಿರುವ ಆಸ್ತಿ ಹಾಗೂ ನಗದು ಬಗ್ಗೆ ಈಗಾಗಲೇ ವಿವರ ಸಲ್ಲಿಸಿದ್ದಾರೆ. ಹೀಗೆ ವಿವರ ಸಲ್ಲಿಸಿರುವವರಲ್ಲಿ, ಹಲವು ಸಚಿವರು ಲಕ್ಷಾಂತರ ರೂ.ಗಳನ್ನು ಕೈಯಲ್ಲಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಈ ನಗದಿನಲ್ಲಿ ಹೆಚ್ಚಿನವು ದೊಡ್ಡ ಮುಖಬೆಲೆಯ ಹಳೆಯ ನೋಟುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು, ಮುಂದಿನ ಒಂದು ತಿಂಗಳಲ್ಲಿ ಸಚಿವರುಗಳು ಹೇಗೆ ಸಾಲಿನಲ್ಲಿ ನಿಲ್ಲಲಿದ್ದಾರೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿವೆ.

ವರ್ಷಾರಂಭದಲ್ಲಿ ಸಲ್ಲಿಸಲಾದ ವಿವರಗಳ ಪ್ರಕಾರ, ಸಚಿವ ಅರುಣ್ ಜೇಟ್ಲಿ ಮತ್ತು ಅವರ ಪತ್ನಿ ತಮ್ಮ ಕೈಯಲ್ಲಿ 75 ಲಕ್ಷ ನಗದು ಇರುವುದಾಗಿ ಘೋಷಿಸಿಕೊಂಡಿದ್ದರು. ಆ ಮೂಲಕ ಕೇಂದ್ರ ಸಚಿವರಲ್ಲೇ ಅತ್ಯಂತ ಶ್ರೀಮಂತ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ‘ಹಫಿಂಗ್‌ಸ್ಟನ್ ಪೋಸ್ಟ್’ ವರದಿ ತಿಳಿಸಿದೆ. 2015-16ರ ಘೋಷಣೆಯ ಪ್ರಕಾರ, ಪ್ರಧಾನಿ ಮೋದಿಯವರು ತಮ್ಮ ಬಳಿ 90,000 ನಗದು ಇದೆ ಎಂದು ಘೋಷಿಸಿದ್ದರು. ಎಲ್ಲ ಸಚಿವರು ತಮ್ಮ ಆಸ್ತಿ ಘೋಷಣೆ ಮಾಡಿಲ್ಲ, ಕೆಲವರು ತಮ್ಮ ಬಳಿ ನಗದು ಎಷ್ಟಿದೆ ಎಂಬ ಸ್ಪಷ್ಟ ವಿವರಣೆ ನೀಡಿರಲಿಲ್ಲ. ಗೃಹ ಸಚಿವರು ತಮ್ಮ ಬಳಿ 1 ಲಕ್ಷಕ್ಕಿಂತ ಅಕ ಮೊತ್ತ ಕೈಯಲ್ಲಿದೆ ಎಂದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಅವರ ಪತಿ 13 ಲಕ್ಷ ನಗದು, ವೆಂಕಯ್ಯ ನಾಯ್ಡು ದಂಪತಿ 1.79 ಲಕ್ಷ, ಸ್ಮತಿ ಇರಾನಿ ಬಳಿ 7.6 ಲಕ್ಷ ಇತ್ತೆಂದು ದಾಖಲೆಗಳು ತಿಳಿಸುತ್ತವೆ.

Latest Videos

click me!