
ಆನೆಗಳಿಗೆ ಕೋಪ ಬಂದರೆ ಏನೆಲ್ಲಾ ಮಾಡುತ್ತವೆ ಎನ್ನುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಮದವೇರಿದ ಗಜವನ್ನು ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಗುಂಪಿನಲ್ಲಿದ್ದಾಗ ಅವುಗಳ ಶಕ್ತಿ-ಸಾಮರ್ಥ್ಯ ಇನ್ನೂ ಹೆಚ್ಚಾಗಿರುತ್ತದೆ. ಈ ವಿಡಿಯೋದಲ್ಲಿ ದೊಡ್ಡ ಆನೆಯು ಮರಿ ಆನೆಯೊಂದನ್ನು ಸೊಂಡಿಲಲ್ಲಿ ಎತ್ತಿ ಎಸೆಯುವುದನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಮಿಲನದ ಸಂದರ್ಭದಲ್ಲಿ ಅಡ್ಡ ಬಂದಿತೆಂಬ ಕಾರಣಕ್ಕೆ ಕೋಪಗೊಂಡ ಗಂಡಾನೆ ಮರಿ ಆನೆಯನ್ನು 3 ಬಾರಿ ಎಸೆಯುತ್ತದೆ. ಒಂದು ಬಾರಿ ಮಾತ್ರ ಮರಿ ಆನೆಗೆ ಎದ್ದೇಳಲು ಸಹಾಯ ಮಾಡುತ್ತದೆ. ಥ್ಯಾಂಕ್ ಗಾಡ್, ಆನೆ ಮರಿಗೆ ಯಾವುದೇ ಗಾಯಗಳಾಗುವುದಿಲ್ಲ.
ಆಫ್ರಿಕಾದ ಆ್ಯಡೋ ಎಲಿಫೆಂಟ್ ನ್ಯಾಷನಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಫೇಸ್ ಬುಕ್ ಒಂದರಲ್ಲೇ 7 ಸಾವಿರ ಸಲ ಜನ ನೋಡಿದ್ದಾರೆ. ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ನೇಚರ್ ಗೈಡ್ ಜೆನಿ ಸ್ಮಿತಿಸ್ ಹಾಗೂ ಫೋಟೋಗ್ರಾಫರ್ ಲಾಯಿಡ್ ಕಾರ್ಟರ್ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ನೀವೂ ನೋಡಿ ಮೈ ಜುಂ ಎನಿಸುವ ಈ ವಿಡಿಯೋವನ್ನು
ವರದಿ: ಎನ್'ಡಿಟಿವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.