ನಾನು ಲಾಡೆನ್ ಕೊಂದಿದ್ದು ಹೀಗೆ : ಕೊಂದ ರಹಸ್ಯ ಬಿಚ್ಚಿಟ್ಟ ಮಾಜಿ ‘ಸೀಲ್ ಯೋಧ

By Suvarna Web DeskFirst Published May 1, 2017, 6:05 PM IST
Highlights

ಲಾಡೆನ್‌ನನ್ನು ಹತ್ಯೆ ಮಾಡಿದ ಹೊಣೆಯನ್ನು ಹೊತ್ತುಕೊಂಡಿರುವ ರೊಬರ್ಟ್  ಒ’ನೀಲ್ ‘ ದ ಆಪರೇಟರ್’ ಎಂಬ ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದು, ತಾನು ಸಿಡಿಸಿದ ಎರಡು ಗುಂಡಿನಿಂದ ಲಾಡೆನ್ ತಲೆ ಎರಡು ಹೋಳಾಗಿತ್ತು ಎಂದು ಹೇಳಿದ್ದಾನೆ.

ಲಂಡನ್(ಮೇ.01): ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಹೇಗೆ ನಡೆಯಿತು ಎನ್ನುವುದನ್ನು ಸೀಲ್ ನೌಕಾಪಡೆಯ ಮಾಜಿ ಯೋಧನೊಬ್ಬ ತನ್ನ ನೂತನ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

ಲಾಡೆನ್‌ನನ್ನು ಹತ್ಯೆ ಮಾಡಿದ ಹೊಣೆಯನ್ನು ಹೊತ್ತುಕೊಂಡಿರುವ ರೊಬರ್ಟ್  ಒ’ನೀಲ್ ‘ ದ ಆಪರೇಟರ್’ ಎಂಬ ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದು, ತಾನು ಸಿಡಿಸಿದ ಎರಡು ಗುಂಡಿನಿಂದ ಲಾಡೆನ್ ತಲೆ ಎರಡು ಹೋಳಾಗಿತ್ತು ಎಂದು ಹೇಳಿದ್ದಾನೆ.

ಸೀಲ್ ಪಡೆ ಕತ್ತಲೆಯಲ್ಲಿ ಲಾಡೆನ್ ಇದ್ದ ಮನೆಯ ಕಂಪೌಂಡ್‌ನ ಹೊರಗಡೆ ಇಳಿಯಿತು. ತಂಡವನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ವೊಂದನ್ನು ಉದ್ದೇಶಪೂರ್ವಕವಾಗಿ ಡಿಕ್ಕಿಹೊಡೆಸಲಾಯಿತು. ನಮ್ಮ ತಂಡ ಪ್ರಾರಂಭದಲ್ಲಿ ಕಂಪೌಂಡ್ ಗೋಡೆಯನ್ನು ಒಡೆದು ಒಳಗೆ ಹೋಗಲು ವಿವಾಯಿತು. ಗೋಡೆಯನ್ನು ದಾಟುತ್ತಿದ್ದಂತೆ ಕಬ್ಬಿಣದ ಬಾಗಿಲುಗಳು ಟಿನ್ ಕ್ಯಾನಿನ ಮುಚ್ಚಳದಂತೆ ತೆರೆದುಕೊಂಡಿತು. ಅದರಿಂದ ಪಾರಾಗಿ ಒಳಗೆ ಹೋದರೆ ಮೂರು ಅಂತಸ್ತಿನ ಮನೆಗೆ ನಕಲಿ ಬಾಗಿಲುಗಳನ್ನು ಸೃಷ್ಟಿಸಲಾಗಿತ್ತು. ಕಟ್ಟಡವನ್ನು ಹತ್ತಿ ಮೂರನೇ ಅಂತಸ್ತಿಗೆ ಹೋದಾಗ ಮಂಚದ ಮುಂದೆ ನಿಂತಿದ್ದ ಲಾಡೆನ್ ಒಬ್ಬ ಮಹಿಳೆಯನ್ನು ಅಡ್ಡಹಿಡಿದು ರಕ್ಷಣೆ ಪಡೆದುಕೊಂಡಿದ್ದ. ಕ್ಷಣಾರ್ಧದಲ್ಲೇ ನಾನು ಲಾಡೆನ್ ತಲೆಗೆ ಎರಡು ಗುಂಡುಗಳನ್ನು ಹಾರಿಸಿದೆ. ಲಾಡೆನ್ ತಲೆ ಎರಡು ಹೋಳಾಯಿತು. ಲಾಡೆನ್ ಆಗ ಆ ಮಹಿಳೆಯನ್ನು ಬಿಟ್ಟ. ಸತ್ತಿದ್ದನ್ನು ಖಚಿತಪಡಿಸಿಕೊಳ್ಳಲು ನಾನು ಇನ್ನೊಂದು ಗುಂಡು ಹಾರಿಸಿದೆ’ ಎಂದು ನೀಲ್ ಬರೆದುಕೊಂಡಿದ್ದಾರೆ.

ಸೀಲ್ ತಂಡ ಕಾರ್ಯಾಚರಣೆ ನಡೆಸುವಾಗ ಲಾಡೆನ್‌ನ ನಾಲ್ಕು ಮಂದಿ ಹೆಂಡತಿಯರು ಮತ್ತು 17 ಮಂದಿ ಮಕ್ಕಳು ಕಟ್ಟಡದಲ್ಲಿ ಇದ್ದಿರಲಿಲ್ಲ. ಈ ಸುದ್ದಿಯನ್ನು ನಂತರದಲ್ಲಿ ಹಬ್ಬಿಸಲಾಯಿತು. ಲಾಡೆನ್ ಚಿಕ್ಕದಾಗಿ ಗಡ್ಡ ಬಿಟ್ಟಿದ್ದ, ಆತನ ಕೂದಲು ಬಿಳಿಯದಾಗಿತ್ತು. ನಾವು ಅಂದುಕೊಂಡಿದ್ದಕ್ಕಿಂತ ಲಾಡೆನ್ ಎತ್ತರ ಮತ್ತು ತೆಳ್ಳಗಾಗಿದ್ದ ಎಂದು ನೀಲ್ ಹೇಳಿದ್ದಾರೆ.

click me!