ಮಕ್ಕಳ ಅಪಹರಣ ವದಂತಿ; ಕಂಗಾಲಾದ ಜನ

Published : May 14, 2018, 09:36 AM IST
ಮಕ್ಕಳ ಅಪಹರಣ ವದಂತಿ; ಕಂಗಾಲಾದ ಜನ

ಸಾರಾಂಶ

ಪಾವಗಡ ತಾಲೂಕಿನಲ್ಲಿ ಮಕ್ಕಳ ಅಪಹರಣ ವದಂತಿ ಹಬ್ಬಿದ್ದು  ಜನರು ಆತಂಕಕ್ಕೀಡಾಗಿದ್ದಾರೆ.  ಮಕ್ಕಳನ್ನು ಅಪಹರಣ ಮಾಡಿ ಅಂಗಾಂಗಳನ್ನು ಕದಿಯುತ್ತಾರೆಂಬ ವದಂತಿಯೊಂದು ಹಬ್ಬಿದ್ದು   ಪೋಷಕರು ರಾತ್ರಿಯಿಡಿ ನಿದ್ದೆಗೆಟ್ಟು ಮಕ್ಕಳನ್ನು ಕಾಯುತ್ತಿದ್ದಾರೆ. ಅಪರಿಚಿತರು ಗ್ರಾಮಕ್ಕೆ ಬರದಂತೆ ಕಾಯುತ್ತಿದ್ದಾರೆ. 

ಬೆಂಗಳೂರು (ಮೇ. 14):  ಪಾವಗಡ ತಾಲೂಕಿನಲ್ಲಿ ಮಕ್ಕಳ ಅಪಹರಣ ವದಂತಿ ಹಬ್ಬಿದ್ದು  ಜನರು ಆತಂಕಕ್ಕೀಡಾಗಿದ್ದಾರೆ.  

ಮಕ್ಕಳನ್ನು ಅಪಹರಣ ಮಾಡಿ ಅಂಗಾಂಗಳನ್ನು ಕದಿಯುತ್ತಾರೆಂಬ ವದಂತಿಯೊಂದು ಹಬ್ಬಿದ್ದು   ಪೋಷಕರು ರಾತ್ರಿಯಿಡಿ ನಿದ್ದೆಗೆಟ್ಟು ಮಕ್ಕಳನ್ನು ಕಾಯುತ್ತಿದ್ದಾರೆ. ಅಪರಿಚಿತರು ಗ್ರಾಮಕ್ಕೆ ಬರದಂತೆ ಕಾಯುತ್ತಿದ್ದಾರೆ. 
ನೆರೆಯ ಆಂಧ್ರದಿಂದ‌ ಮಕ್ಕಳ ಅಪಹರಣ ತಂಡ ಪಾವಗಡಕ್ಕೆ ಆಗಮಿಸಿದೆ.  ಕಿಡ್ನಿ, ಹೃದಯಕ್ಕಾಗಿ ಮಕ್ಕಳನ್ನು ದಾರುಣವಾಗಿ ಹತ್ಯೆಗೈಯುತ್ತಾರೆಂಬ ವದಂತಿ ವಾಟ್ಸಾಪ್, ಫೇಸ್ ಬುಕ್’ಗಳನ್ನು ಹರಡುತ್ತಿರುವುದನ್ನು ನೋಡಿ ಗ್ರಾಮಸ್ಥರು ಹೆದರಿದ್ದಾರೆ.  

ವದಂತಿಗೆ ಇನ್ನಷ್ಟು ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ಯುವತಿಯೊಬ್ಬಳು ಕಣ್ಮರೆಯಾಗಿದ್ದಾಳೆ.   ಬಹಿರ್ದೆಸೆಗೆ ತೆರಳಿದ್ದ ಪೊನ್ನಸಮುದ್ರ ಗ್ರಾಮದ ಯುವತಿ ನಾಪತ್ತೆಯಾಗಿದ್ದು ಜನರು ಇನ್ನಷ್ಟು ಕಂಗಾಲಾಗಿದ್ದಾರೆ.  ಪಳ್ಳವಳ್ಳಿ, ಪೊನ್ನಸಮುದ್ರ, ದೊಡ್ಡಹಳ್ಳಿ, ಕೆ.ರಾಂಪುರ ಸೇರಿದ್ದಂತೆ ಗಡಿ ಭಾಗದ ಹಳ್ಳಿಗಳಲ್ಲಿ ಜನರು ತಮ್ಮ ಮಕ್ಕಳನ್ನು ಹೊರಗೆ ಹೋಗಲು ಬಿಡುತ್ತಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು