
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಗ್ರ ರ‌್ಯಾಂಕಿಂಗ್ ಗಳಿಕೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018ರಲ್ಲಿ 10 ಉತ್ತಮ ನಗರಗಳ ಪಟ್ಟಿಯಲ್ಲಿ ಸ್ಥಾನ ದೊರೆಯುವುದೇ? ಬಿಬಿಎಂಪಿಗಂತೂ ಈ ಬಾರಿ ಇಂತಹದೊಂದು ನಿರೀಕ್ಷೆಯಲ್ಲಿದೆ.
ಕೇಂದ್ರ ಸರ್ಕಾರ ತನ್ನ ಸ್ವಚ್ಛ ಭಾರತ ಅಭಿಯಾನದ ಜತೆಗೆ, ಸ್ವಚ್ಛ ನಗರಗಳಿಗೆ ಶ್ರೇಯಾಂಕ ನೀಡುವ ಪದ್ಧತಿಯನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ 2015 ರಲ್ಲಿ ಆರಂಭವಾದ ಸ್ವಚ್ಛನಗರ ಸ್ಪರ್ಧೆಯಲ್ಲಿ ಬೆಂಗಳೂರಿಗೆ 2016 ರಲ್ಲಿ 38, 2017ರಲ್ಲಿ 210ನೇ ಸ್ಥಾನಕ್ಕೆ ಕುಸಿತ ಕಂಡಿತ್ತು.
ಶತಾಯಗತಾಯ 2018ರಲ್ಲಿ ಉತ್ತಮ ರ್ಯಾಕಿಂಗ್ ಸಾಧಿಸಬೇಕೆಂದು ಬಿಬಿಎಂಪಿ ಜನವರಿಯಲ್ಲಿ ಆರಂಭವಾಗುವ ಸ್ವಚ್ಛ ಸರ್ವೇಕ್ಷಣಾಕ್ಕೂ ಒಂದು ತಿಂಗಳು ಮುಚ್ಚಿತವಾಗಿ ಸಿದ್ಧತೆ ಮಾಡಿಕೊಂಡಿದ್ದು, ಉತ್ತಮ ರ‌್ಯಾಂಕಿಂಗ್ ಗಳಿಸುವ ವಿಶ್ವಾಸದಲ್ಲಿದೆ. ಫೆ.15ರಿಂದ ಫೆ.17ರ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 80 ವಾರ್ಡ್‌ಗಳನ್ನು ಕೇಂದ್ರದ ತಂಡ ಪರಿಶೀಲನೆ ಮಾಡಿತ್ತು.
45 ಕ್ಕೂ ಹೆಚ್ಚು ಕೇಂದ್ರದ ಅಧಿಕಾರಿಗಳು ವಿವಿಧ ಬಡಾವಣೆಯಲ್ಲಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಇದೇ ಮೇ 18 ರ ಬಳಿಕ ನಗರ ಸ್ವಚ್ಛನಗರ ಶ್ರೇಯಾಂಕ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.