ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯಿಂದ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆದಿರುವ ಘಟನೆ ಇಲ್ಲಿನ ಕೊಯಿಲೂರ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ (ಜ. 12): ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯಿಂದ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆದಿರುವ ಘಟನೆ ಇಲ್ಲಿನ ಕೊಯಿಲೂರ ಗ್ರಾಮದಲ್ಲಿ ನಡೆದಿದೆ.
ಹನುಮಂತ ಎಂಬಾತ ಆಟವಾಡುತ್ತಿದ್ದ ಮಕ್ಕಳನ್ನು ಅಟ್ಟಾಡಿಸಿ ಕೊಡಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ನಾಲ್ವರು ಮಕ್ಕಳಿಗೆ ಕೊಡಲಿಯಿಂದ ಹೊಡೆದು ಗಾಯ ಮಾಡಿದ್ದಾನೆ. ಬಿಡಿಸಲು ಹೋದ ಬಸವಂತರಾಯನ (30) ಮೇಲೂ ಹಲ್ಲೆ ನಡೆದಿದೆ.
ಮಹೇಶ, ವೆಂಕಟೇಶ, ಭೀಮರಾಯ, ಪರಶುರಾಮ ಎನ್ನುವ ಮಕ್ಕಳಿಗೆ ಗಾಯವಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹೇಶ್ ಗೆ ಗಂಭೀರ ಗಾಯಗಳಾಗಿದ್ದು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
-ಸಾಂದರ್ಭಿಕ ಚಿತ್ರ