ಬೆಂಗಳೂರಿನ ಆಸ್ಪತ್ರೆಯಲ್ಲಿ ಮನಕಲುಕುವ ಘಟನೆ? ಮುಟ್ಟದೇ ಸತ್ತಿದೆ ಎಂದ ಸಿಬ್ಬಂದಿ,ಬೈಕಿನಲ್ಲಿಯೇ ಸಾಗಿಸಿದ ತಂದೆ

Published : Apr 30, 2017, 06:04 PM ISTUpdated : Apr 11, 2018, 01:13 PM IST
ಬೆಂಗಳೂರಿನ ಆಸ್ಪತ್ರೆಯಲ್ಲಿ ಮನಕಲುಕುವ ಘಟನೆ? ಮುಟ್ಟದೇ ಸತ್ತಿದೆ ಎಂದ ಸಿಬ್ಬಂದಿ,ಬೈಕಿನಲ್ಲಿಯೇ ಸಾಗಿಸಿದ ತಂದೆ

ಸಾರಾಂಶ

ಆನೇಕಲ್ ತಾಲೂಕಿನ ಕರ್ಪೂರ ಗೇಟ್ ಬಳಿ ಅಸ್ಸಾಂ ಮೂಲದ ದಂಪತಿಯ 3 ವರ್ಷದ ಪುತ್ರ ರಹೀಂ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ.

ಆನೆಕಲ್(ಏ.30): ಇದು ರಾಜ್ಯದ ಜನತೆ ತಲೆ ತಗ್ಗಿಸುವ ಘಟನೆ. ಓಡಿಶಾ ಅಥವಾ ಅಸ್ಸಾಂ ನಂತಹ ಹೊರ ರಾಜ್ಯದಲ್ಲಿ ನಡೆದ ಕರಾಳ ದುರಂತ. ರಾಜ್ಯದಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯ ಚಿತ್ರಣ ಇದು.

ಸತ್ತವರಂತೆ ಬದುಕುತ್ತಿದ್ದಾರೆ ಸರ್ಕಾರಿ ಆಸ್ಪತ್ರೆ ವೈದ್ಯರು,  ಸಿಬ್ಬಂದಿ. ಆನೇಕಲ್ ತಾಲೂಕು ಆಸ್ಪತ್ರೆಯಲ್ಲಿ ನರಳುತ್ತಿರುವ ಮಗುವನ್ನ ತಿರುಗಿಯೂ ನೋಡದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಾಗಿಲನ್ನೇ ತೆರೆಯದೆ ಹೊರಗೆ ನಿಲ್ಲಿಸಿ ಒಂದು ಗಂಟೆ ನಂತರ ಬಂದು ಮಗುವಿನ ಸತ್ತಿದೆ ಎಂದ ಹೇಳಿ ತಮ್ಮ ದುಷ್ಟತನದ ಪರಮಾವಧಿ ಮೆರೆದಿದ್ದಾರೆ. ಪಾಪ ಮೃತ ಮಗುವಿನ ತಂದೆಗೆ ತನ್ನ ಮಗುವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್  ಕೂಡ ನೀಡಲಿಲ್ಲ.ನೊಂದ ಪೋಷಕರು ಮೃತಮಗುವನ್ನು ಬೈಕಿನಲ್ಲಿಯೇ ಸಾಗಿಸಿದ್ದಾರೆ.

ನಡಿದಿದ್ದಾರೂ ಏನು ?

ಆನೇಕಲ್ ತಾಲೂಕಿನ ಕರ್ಪೂರ ಗೇಟ್ ಬಳಿ ಅಸ್ಸಾಂ ಮೂಲದ ದಂಪತಿಯ 3 ವರ್ಷದ ಪುತ್ರ ರಹೀಂ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆಂದು ಆನೇಕಲ್ ತಾಲೂಕು ಆಸ್ಪತ್ರೆಗೆ ಪೋಷಕರು ಬಂದಿದ್ದರು. ಆದರೆ ವೈದ್ಯರು ಕನಿಷ್ಠ ಮಾನವೀಯತೆಯನ್ನು ಮೆರೆಯಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌