BJP Hits Back : ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಚಿದಂಬರಂ ಗೆದ್ದಿಲ್ಲ!

By Suvarna NewsFirst Published Dec 17, 2021, 6:24 PM IST
Highlights

ಚಿದಂಬರಂ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ
ಕನಿಷ್ಠ ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಗೆದ್ದಿಲ್ಲ
ಚುನಾವಣೆಯಲ್ಲಿ ಸೋತಾಗ ಮಾತ್ರ ಮೋದಿ ಹೆದರುತ್ತಾರೆ ಎನ್ನುವ ಹೇಳಿಕೆಗೆ ತಿರುಗೇಟು

ನವದೆಹಲಿ (ಡಿ.17): ಪ್ರಧಾನಿ ನರೇಂದ್ರ ಮೋದಿ (PM Narendra Modi) ಚುನಾವಣೆಯ ಸೋಲುಗಳಿಗೆ ಹೆದರುತ್ತಾರೆ ಎನ್ನುವ ಮಾಜಿ ವಿತ್ತ ಸಚಿವ (Finance Minister) ಪಿ.ಚಿದಂಬರಂ ( P Chidambaram)ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಚಿದಬರಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Union Minister for Parliamentary Affairs Pralhad Joshi ), ಸ್ವಂತ ಶಕ್ತಿಯಿಂದ ಅವರು ಈವರೆಗೂ ಚುನಾವಣೆಗೆ ಸ್ಪರ್ಧೆ ಮಾಡಿದವರಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಅವರು ಗೆದ್ದವರಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಸೋಲುಗಳಿಗೆ ಹೆದರುತ್ತಾರೆ. ಅವರ ನೇತೃತ್ವದ ಕೇಂದ್ರ ಸರ್ಕಾರ ವಿನಾಶಕಾರಿ ಎಂದು ಚಿದಂಬರಂ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ್ ಜೋಶಿ, "ಹಾಗೇನಾದರೂ ಸ್ವಂತ ಬಲದಿಂದ ಅವರು ಕನಿಷ್ಠ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತರೂ ಅವರು ಸೋಲು ಕಾಣುತ್ತಾರೆ. ಕಾಂಗ್ರೆಸ್ ಪಕ್ಷದ ಬೆನ್ನಿಗೆ ಡಿಎಂಕೆ ನಿಂತ ಕಾರಣಕ್ಕಾಗಿ ಅವರು ಸಂಸದರಾದವರು. ತಮ್ಮ ಸ್ವಂತ ಬಲದಿಂದ ಚುನಾವಣೆಗೆ ನಿಲ್ಲುವುದು ತಿಳಿದಿಲ್ಲ. ದೇಶಕ್ಕೆ ಅವರೇ ದೊಡ್ಡ ಆಪತ್ತು. ಅವರು ದೇಶದ ವಿತ್ತ ಸಚಿವ ಹಾಗೂ ರಕ್ಷಣಾ ಸಚಿವ ಆಗಿದ್ದ ಹಂತದಲ್ಲಿ ದೇಶದ ಆರ್ಥಿಕತೆ ಹಾಗೂ ಭದ್ರತೆಯನ್ನು ವಿನಾಶದ ಅಂಚಿಗೆ ನಿಲ್ಲಿಸಿದ್ದರು. ಅವರು ಚಿದಂಬರಂ ಅಲ್ಲ, ಡಿಸಾಸ್ಟರಮ್ ಎಂದು ಸಂಸತ್ ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಹೇಳಿದರು.

ಅಸ್ಸಾಂ ನಲ್ಲಿ(Assam) ಮೂರು ದಿನಗಳ ಕಾಂಗ್ರೆಸ್ ಕಾರ್ಯಕರ್ತರ (Congress workers) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪಿ.ಚಿದಂಬರಂ ಪ್ರಸ್ತುತ ಬಿಜಿಪಿ ನೇತೃತ್ವದ ಕೇಂದ್ರ ಸರ್ಕಾರ, ವಿನಾಶಕಾರಿ ಸರ್ಕಾರ ಎಂದು ಟೀಕೆ ಮಾಡಿದ್ದರು. ಚುನಾವಣೆಗಳನ್ನು ಗೆಲ್ಲಲು ಕೇಂದ್ರ ಸರ್ಕಾರ ಧರ್ಮದ ಅಧಾರದಲ್ಲಿ ದೇಶವನ್ನು ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದ ಚಿದಂಬರಂ, "ಮೋದಿ ಅವರಿಗೆ ಅವರ ಪಕ್ಷ, ಸಂಸದರು, ಮುಖ್ಯಮಂತ್ರಿಗಳು, ಸಚಿವರು, ರಾಷ್ಟ್ರಪತಿಗಳು, ಉಪಾಧ್ಯಕ್ಷರು, ನ್ಯಾಯಾಧೀಶರು, ದೇವರು ಹೀಗೆ ಯಾರ ಭಯವೂ ಇಲ್ಲ. ಅವರು ಹೆದರುವ ಒಂದೇ ಒಂದು ಸಂಗತಿ ಎಂದರೆ ಅದು ಚುನಾವಣೆಗಳ ಸೋಲು. ಅದು ಎಂಥದ್ದೇ ಚುನಾವಣೆ ಆಗಿರಲಿ, ಅದರಲ್ಲಿ ಸೋಲಲು ಅವರು ಇಷ್ಟಪಡುವುದಿಲ್ಲ. ಜಗತ್ತಿನಲ್ಲಿ ಯಾವುದಾದರೂ ಒಂದು ವಿಷಯಕ್ಕಾದರೂ ಅವರು ಭಯ ಪಡುತ್ತಾರಲ್ಲ ಅದೇ ಖುಷಿಯ ವಿಚಾರ. ಈ ಸಂಪೂರ್ಣ ಅಸಮರ್ಥ ಸರ್ಕಾರವನ್ನು ನಿಯಂತ್ರಿಸುವ ಏಕೈಕ ಮಾರ್ಗ ಏನೆಂದರೆ, ಸಾಧ್ಯವಾದಷ್ಟು ಮುಂದಿನ ಚುನಾವಣೆಗಳಲ್ಲಿ ಅವರನ್ನು ಸೋಲಿಸುವುದು. ಹಾಗಂತ ನಾವು ಇದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುತ್ತೇವೆ ಎಂದು ಹೇಳುತ್ತಿಲ್ಲ. ಬದಲಾಗಿ ದೃಢವಾದ ಪ್ರಯತ್ನ ಮಾಡಿದರೆ, ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದರು.

TMC Pre Poll Promise: ಗೋವಾಗೆ ದೇವರು ಒಳ್ಳೆಯದು ಮಾಡಲಿ! ಟಿಎಂಸಿ ನೇರ ನಗದು ಯೋಜನೆಗೆ ಚಿದಂಬರಂ ಟ್ವೀಟ್ ಗುದ್ದು
2024ರ ಲೋಕಸಭೆ ಚುನಾವಣೆಯ ( 2024 General Elections) ವೇಳೆ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಇದೇ ಅಭಿಪ್ರಾಯವನ್ನು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾದಲ್ಲಿ ಕಾಂಗ್ರೆಸ್ ಹೊರತಾದ ತೃತೀಯ ರಂಗ ಹೋರಾಟ ನಡೆಸಬೇಕು ಎಂದಿದ್ದರು.

click me!