
ಫ್ಲೋರಿಡಾ(ಡಿ.17): ಮಾಸ್ಕ್ ಕಡ್ಡಾಯಗೊಳಿಸಿದ್ದಕ್ಕೆ ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪನ್ನು ಮಾಸ್ಕ್ ಆಗಿ ಧರಿಸಿ ಪ್ರತಿಭಟಿಸಿದ ಅಸಹ್ಯಕರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಈತ ತಾನು ಡಜನ್‌ಗೂ(12)ಗೂ ಹೆಚ್ಚು ಬಾರಿ ಈ ರೀತಿ ಒಳ ಉಡುಪನ್ನು ಮಾಸ್ಕ್ ಆಗಿ ಧರಿಸಿದ್ದಾಗಿ ಹೇಳಿದ್ದಾನೆ. ಮಾಸ್ಕ್ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಈತ ವಿಮಾನದಲ್ಲಿ ಈ ರೀತಿ ಮಹಿಳೆಯರ ಕೆಂಪು ಬಣ್ಣದ ಒಳ ಉಡುಪನ್ನೇ ಮಾಸ್ಕ್ ರೀತಿ ಧರಿಸಿದ್ದಾನೆ. ಇದರಿಂದ ಕೂಡಲೇ ಆತನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಹೊಸ ಕೋವಿಡ್ ರೂಪಾಂತರಿಯ ಭಯ ಜಗತ್ತನೇ ಕಾಡುತ್ತಿರುವ ಈ ಸಮಯದಲ್ಲಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರೆ ಈತ ಮಾತ್ರ ಮಹಿಳೆಯರ ಒಳ ಉಡುಪನ್ನು ಮಾಸ್ಕ್ ರೀತಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಿದ್ದನ್ನು ಕಂಡು ವಿಮಾನದಲ್ಲಿದ್ದ ಜನ ಗಾಬರಿಗೊಂಡಿದ್ದಾರೆ.
ಕೇಪ್ ಕೋರಲ್(Cape Coral)ಪ್ರದೇಶದ ನಿವಾಸಿಯಾಗಿರುವ ಆಡಮ್ ಜೆನ್ನೆ (Adam Jenne) ತಾನು ಇದನ್ನು ಕೊರೋನಾ ಆರಂಭವಾದಾಗಿನಿಂದಲೂ ಮುಖ ಗವಸಿನ ರೀತಿ ಈ ಹಿಂದೆಯೂ ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಿದ್ದಾಗಿ ಜೆನ್ನೆ ಹೇಳಿದ್ದಾರೆ. ಈತನ ಈ ಅಸಹ್ಯ ವರ್ತನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫೋರ್ಟ್ ಲಾಡರ್‌ಡೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಷಿಂಗ್ಟನ್ ಡಿಸಿಗೆ ತೆರಳುತ್ತಿರುವ ವಿಮಾನದಿಂದ ಇಳಿಯುವಂತೆ ವಿಮಾನ ಸಿಬ್ಬಂದಿ ಈತನಿಗೆ ಹೇಳುವ ದೃಶ್ಯವಿದೆ.
Inner Garments' Care: ಕೊಳಕು ಕೊಳಕು ಬಳಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ
ಕೇಪ್ ಕೋರಲ್‌ನ ಆಡಮ್ ಜೆನ್ನೆ(Adam Jenne) ಅವರು ಈ ಹಿಂದೆಯೂ ವಿಮಾನಗಳಲ್ಲಿ ಫೇಸ್‌ಮಾಸ್ಕ್ ಬದಲು ಕೆಂಪು ಒಳ ಉಡುಪುಗಳನ್ನು ಮಾಸ್ಕ್ ಆಗಿ ಧರಿಸಿದ್ದರು ಎಂದು ಹೇಳಿದರು. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಫೋರ್ಟ್ ಲಾಡರ್‌ಡೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Fort Lauderdale International Airport) ವಾಷಿಂಗ್ಟನ್ ಡಿಸಿ (Washington DC)ಗೆ ತೆರಳುತ್ತಿದ್ದ ಜೆನ್ನೆಗೆ ವಿಮಾನದಿಂದ ಇಳಿಯುವ ಅಗತ್ಯವಿದೆ ಎಂದು ಕ್ಯಾಬಿನ್ ಸಿಬ್ಬಂದಿ ಹೇಳಿದರು.
ಇದಕ್ಕೆ ಆಡಮ್ ಜೆನ್ನೆ (Adam Jenne) ತಾನು ಏಕೆ ವಿಮಾನದಿಂದ ಇಳಿಯಬೇಕು ಎಂದು ವಿಮಾನದ ಸಿಬ್ಬಂದಿಯನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಸಿಬ್ಬಂದಿ, ನೀವು ಮಾಸ್ಕ್ ನಿಯಮವನ್ನು ಪಾಲಿಸಿಲ್ಲ ಎಂದು ಹೇಳುತ್ತಾರೆ. ಈ ವಾದ ವಿವಾದದ ಉದ್ದಕ್ಕೂ ಜೆನ್ನೆ ತನ್ನ ಮುಖ, ಮೂಗು ಬಾಯನ್ನು ಒಳ ಉಡುಪಿನಿಂದ ಮುಚ್ಚಿಕೊಂಡಿದ್ದ ನಂತರ ಕೊನೆಗೂ ವಿಮಾನದಿಂದ ಇಳಿದು ಹೋಗಿದ್ದಾನೆ. ಇದರಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮಾಸ್ಕ್ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ ಜೆನ್ನೆ, ಈ ಅಸಂಬದ್ಧವಾದ ರೀತಿಗೆ ಅಸಂಬದ್ಧವಾದ ರೀತಿಯಲ್ಲೇ ಉತ್ತರಿಸಬೇಕು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಯೋಗವನ್ನು ತಾನು ಈ ಹಿಂದೆಯೋ ಬಳಸಿದ್ದಾಗಿ ಹೇಳಿದ್ದು, ನನ್ನನ್ನು ನೋಡಿ ಪ್ರತಿ ವಿಮಾನದಲ್ಲೂ ವಿಮಾನ ಸಿಬ್ಬಂದಿಯ ವರ್ತನೆ ವಿಭಿನ್ನವಾಗಿತ್ತು. ಕೆಲವರು ವಾದ ಮಾಡಿದರೆ ಇನ್ನು ಕೆಲವರು ಒಂಥರಾ ನೋಡಿ ಸುಮ್ಮನಾಗುತ್ತಾರೆ ಎಂದು ಆತ ಹೇಳಿದ್ದಾನೆ.
ಬಿಗಿಯಾಗಿರಲಿ ಎಂದು 24 ಗಂಟೆ ಬ್ರಾ ಧರಿಸಿದ್ದರೂ ಸ್ತನ ಸಡಿಲವಾಗುತ್ತೆ..!
ಈತ ಯಾವಾಗಲೂ ಇದೇ ರೀತಿ ಮಾಡಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆದರೆ ಈ ಬಾರಿ ಆತನಿಗೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ವಿಮಾನದಿಂದ ಇಳಿಸಲ್ಪಟ್ಟ ನಂತರ ತಾನು ಬ್ರೋವರ್ಡ್ ಕೌಂಟಿ ಶೆರಿಫ್ ( Broward County Sheriff) ಅವರ ಕಚೇರಿಯನ್ನು ತಲುಪಿದ್ದಾಗಿ ಆತ ಹೇಳಿದ್ದಾನೆ.
ಘಟನೆಯ ನಂತರ, ವಿಮಾನಯಾನ ಕಂಪನಿಯು ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ವಿಮಾನದ ಪ್ರಯಾಣಿಕ ಸ್ಪಷ್ಟವಾಗಿ ಫೆಡರಲ್ ಮಾಸ್ಕ್ ಆದೇಶವನ್ನು ಅನುಸರಿಸಿರಲಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿ ವಿಮಾನ ಟೇಕ್-ಆಫ್ ಆಗುವ ಮೊದಲೇ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಅವರಿಗೆ ನಾವು ಪ್ರಶಂಸೆ ವ್ಯಕ್ತಪಡಿಸುತ್ತೇವೆ. ವಿಮಾನ ಟೇಕ್ ಅಫ್ ಆದ ನಂತರ ಆಗುವ ಅನಾಹುತವನ್ನು ತಪ್ಪಿಸಲು ನಾವು ಸದಾ ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ. ನಂತರ WFTX ನ್ಯೂಸ್‌ನೊಂದಿಗೆ ಮಾತನಾಡಿದ ಜೆನ್ನೆ ತನನ್ನು ಹೊರಹಾಕಿದ ನಂತರ ನನಗೆ ಬೆಂಬಲವಾಗಿ ಹಲವಾರು ಪ್ರಯಾಣಿಕರು ವಿಮಾನವನ್ನು ತೊರೆದರು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ