ತನ್ನ ಪತಿಯ ಮರಣದ ಸುದ್ದಿಯನ್ನು ವಾಚಿಸಿದ ನ್ಯೂಸ್ ಆ್ಯ0ಕರ್

Published : Apr 07, 2017, 10:38 PM ISTUpdated : Apr 11, 2018, 12:43 PM IST
ತನ್ನ ಪತಿಯ ಮರಣದ ಸುದ್ದಿಯನ್ನು ವಾಚಿಸಿದ ನ್ಯೂಸ್ ಆ್ಯ0ಕರ್

ಸಾರಾಂಶ

ವರದಿಗಾರ ಫೋನ್’ನಲ್ಲಿ ಅಪಘಾತದ ಹಾಗೂ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದಾಗ, ಸುಪ್ರೀತ್ ಕೌರ್’ಗೆ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ತನ್ನ ಪತಿಯೂ ಸೇರಿದ್ದಾರೆ ಎಂದು ಗೊತ್ತಾಗಿದೆ. ಆದರೂ ತಮ್ಮ ಕರ್ತವ್ಯವನ್ನು ಪಾಲಿಸಿದ ಸುಪ್ರೀತ್ ಕೌರ್ ಬುಲೆಟಿನ್ ಸಂಪೂರ್ಣಗೊಳಿಸಿದ್ದಾರೆ.

ರಾಯ್’ಪುರ (ಏ.08): ಖಾಸಗಿ ಚ್ಯಾನೆಲ್’ವೊಂದರ ಸುದ್ದಿವಾಚಕಿ ತನ್ನ ಗಂಡನ ಮರಣದ ಸುದ್ದಿಯನ್ನೇ ವಾಚಿಸಬೇಕಾದ  ಘಟನೆ ಛತೀಸ್’ಗಢದಲ್ಲಿ ನಡೆದಿದೆ.

ಐಬಿಸಿ 24 ಎಂಬ ಸುದ್ದಿವಾಹಿನಿಯ  ನ್ಯೂಸ್ ಆ್ಯ0ಕರ್ ಸುಪ್ರೀತ್ ಕೌರ್ ಬೆಳಗ್ಗೆ  ಸ್ಟುಡಿಯೋದಲ್ಲಿ ಸುದ್ದಿ ವಾಚಿಸುತ್ತಿರುವಾಗ ಅಪಘಾತವೊಂದರ ಬ್ರೇಕಿಂಗ್ ಸುದ್ದಿ ಬಂದಿದೆ.

ಸುದ್ದಿ ಓದಿದ ಬಳಿಕ, ವರದಿಗಾರ ಫೋನ್’ನಲ್ಲಿ ಅಪಘಾತದ ಹಾಗೂ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದಾಗ, ಸುಪ್ರೀತ್ ಕೌರ್’ಗೆ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ತನ್ನ ಪತಿಯೂ ಸೇರಿದ್ದಾರೆ ಎಂದು ಗೊತ್ತಾಗಿದೆ. ಆದರೂ ತಮ್ಮ ಕರ್ತವ್ಯವನ್ನು ಪಾಲಿಸಿದ ಸುಪ್ರೀತ್ ಕೌರ್ ಬುಲೆಟಿನ್ ಸಂಪೂರ್ಣಗೊಳಿಸಿದ್ದಾರೆ.

 

ಬುಲೆಟಿನ್ ಮುಗಿಸಿದ ಬಳಿಕ ಕೂಡಲೇ ವರದಿಗಾರರನ್ನು ಸಂಪರ್ಕಿಸಿದಾಗ, ಅಪಘಾತದಲ್ಲಿ ಮೃತಪಟ್ಟವರಲ್ಲೊಬ್ಬರು ತನ್ನ ಪತಿಯೆಂದು ಖಚಿತವಾಗಿದೆ.

ಕಳೆದ 9 ವರ್ಷಗಳಿಂದ ಸುದ್ದಿವಾಚಕಿಯಾಗಿ ಕೆಲಸಮಾಡುತ್ತಿರುವ ಸುಪ್ರೀತ್ ಕೌರ್ ಕಳೆದ ವರ್ಷ ಹರ್ಶದ್ ಕಾವಡೆಯೊಂದಿಗೆ ವಿವಾಹವಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ