ಕೇರಳ ಪ್ರವಾಹ ನಿಧಿಗೆ ಬಂದ 3.26 ಕೋಟಿ ರು. ಚೆಕ್‌ಗಳು ಬೌನ್ಸ್‌

Published : Jan 23, 2019, 11:02 AM IST
ಕೇರಳ ಪ್ರವಾಹ ನಿಧಿಗೆ ಬಂದ 3.26 ಕೋಟಿ ರು. ಚೆಕ್‌ಗಳು ಬೌನ್ಸ್‌

ಸಾರಾಂಶ

ಜನ ತಾಮುಂದು-ನಾಮುಂದು ಎಂದು ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿದರು. ಆದರೆ ಈ ದೇಣಿಗೆ ಹಣದಲ್ಲಿನ 3.26 ಕೋಟಿ ರು. ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿವೆ

ತಿರುವನಂತಪುರಂ[ಜ.23]: ಕೇರಳದಲ್ಲಿ ಪ್ರವಾಹ ಉಂಟಾದಾಗ ಜನ ತಾಮುಂದು-ನಾಮುಂದು ಎಂದು ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿದರು. ಆದರೆ ಈ ದೇಣಿಗೆ ಹಣದಲ್ಲಿನ 3.26 ಕೋಟಿ ರು. ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿವೆ ಎಂಬ ಅಪಮಾನಕಾರಿ ಸಂಗತಿ ಈಗ ಬಯಲಾಗಿದೆ.

ಕೇರಳ ವಿಧಾನಸಭೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ವಿಷಯ ತಿಳಿಸಿದ್ದಾರೆ. ಕಾಸರಗೋಡು ಶಾಸಕ ನೆಲ್ಲಿಕ್ಕಣ್ಣು ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ವಿಜಯನ್‌, ‘395 ಚೆಕ್‌ ಹಾಗೂ ಡಿ.ಡಿ.ಗಳನ್ನು ಅಮಾನ್ಯ ಮಾಡಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ 3.26 ಕೋಟಿ ರುಪಾಯಿ’ ಎಂದು ತಿಳಿಸಿದ್ದಾರೆ.

ಕೇರಳ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 2,797.67 ಕೋಟಿ ರುಪಾಯಿ ಹಣವು 2018ರ ನ.30ರವರೆಗೆ ಸಂದಾಯವಾಗಿದೆ. ಇದರಲ್ಲಿ 2,537.22 ಕೋಟಿ ರು. ಚೆಕ್‌ ರೂಪದಲ್ಲಿ ಇದ್ದರೆ, 7.46 ಕೋಟಿ ರು. ಚೆಕ್‌ ರೂಪದಲ್ಲಿದೆ. 260.45 ಕೋಟಿ ರು.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 3,226.21 ಕೋಟಿ ರು. ಹಣವು ಸಿಎಂ ನಿಧಿಗೆ ಸಂಗ್ರಹವಾಗಿದ್ದರೆ, 1199.69 ಕೋಟಿ ರು. ಖರ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ