ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

Published : Jan 23, 2019, 08:56 AM ISTUpdated : Jan 23, 2019, 11:27 AM IST
ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು. 

ವಾರಾಣಸಿ: ಇಲ್ಲಿ ಮಂಗಳವಾರ ಆರಂಭವಾದ ಪ್ರವಾಸಿ ಭಾರತ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಮೋದಿ ಅವರು ಆರಂಭದಲ್ಲೇ ಸಿದ್ಧಗಂಗಾ ಯತಿಗಳು ಶಿವಸಾಯುಜ್ಯ ಹೊಂದಿದ ಸುದ್ದಿಯನ್ನು ಪ್ರಸ್ತಾಪಿಸಿದರು. ‘ಸಭಿಕರಿಗೆಲ್ಲ ಸ್ವಾಗತ. 

ನಾನು  ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ ಬಗ್ಗೆ ಸಂತಾಪ ವ್ಯಕ್ತಪಡಿಸಲು ಬಯಸುತ್ತೇನೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಸಂದರ್ಭ ಒದಗಿ ಬಂದಿತ್ತು’ ಎಂದು ಹೇಳಿದರು. ನಂತರ ಅವರು ಪ್ರವಾಸಿ ಭಾರತೀಯ ದಿವಸದ ಭಾಷಣತ್ತ ಹೊರಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: Dhurandhar Ott Release Date - ವಿಶ್ವದ ಗಮನ ಸೆಳೆದ ರಣವೀರ್‌ ಸಿಂಗ್‌ 'ಧುರಂಧರ್‌' ಒಟಿಟಿಯಲ್ಲಿ ರಿಲೀಸ್ ಯಾವಾಗ?