ನಂಜನಗೂಡಲ್ಲಿ ರಥೋತ್ಸವ: ಹಗ್ಗ ತುಂಡು, ರಥ ತಳ್ಳಿದ ಜೆಸಿಬಿ!

Published : Mar 20, 2019, 08:30 AM IST
ನಂಜನಗೂಡಲ್ಲಿ ರಥೋತ್ಸವ: ಹಗ್ಗ ತುಂಡು, ರಥ ತಳ್ಳಿದ ಜೆಸಿಬಿ!

ಸಾರಾಂಶ

 ಲಕ್ಷಾಂತರ ಭಕ್ತರ ನಡುವೆ ನಂಜನಗೂಡಲ್ಲಿ ಪಂಚ ಮಹಾರಥೋತ್ಸವ ವೈಭವ| ಹಗ್ಗ ತುಂಡಾದ ಕಾರಣ 2.30 ತಾಸು ತಡವಾಗಿ ಆರಂಭಗೊಂಡ ಗೌತಮ ರಥೋತ್ಸವ| ಕ್ರೇನ್‌, ಜೆಸಿಬಿ ಬಳಸಿ ರಥಕ್ಕೆ ಚಾಲನೆ| ಸಾಂಗವಾಗಿ ಸಾಗಿದ ಇನ್ನುಳಿದ 4 ರಥಗಳು

ನಂಜನಗೂಡು[ಮಾ.20]: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಶ್ರೀಕಂಠೇಶ್ವರ ಸ್ವಾಮಿಯವರ ಗೌತಮ ಪಂಚ ಮಹಾರಥೋತ್ಸವವು ಮಂಗಳವಾರ ಲಕ್ಷಾಂತರ ಭಕ್ತಾರ ಜಯಘೋಷ ಉದ್ಘೋಷಗಳ ನಡುವೆ ವಿಜೃಂಭಣೆ ನೆರವೇರಿತು.

ಆದರೆ, ಗೌತಮ ರಥಕ್ಕೆ ಹಳೆಯ ಹಗ್ಗವನ್ನು ಬಳಕೆ ಮಾಡಿದ್ದರಿಂದಾಗಿ ರಥ ಸ್ಥಳ ಬಿಡುವ ಮುನ್ನವೇ ಹಗ್ಗ ತುಂಡಾಯಿತು. ಬೇರೆ ಹಗ್ಗ ಕಟ್ಟಲು ಒಂದು ತಾಸು ತಡವಾಯಿತು, ನಂತರವೂ ಆ ಹಗ್ಗ ಸಹ ತುಂಡಾಯಿತು. ಇದಾದ ಬಳಿಕ ಕಟ್ಟಿದ ಹಗ್ಗದ ಕಥೆಯೂ ಇದೇ ಆಗಿ, ರಥ ಒಂದಿಂಚು ಸಹ ಕದಲಿಲ್ಲ. ಕೊನೆಗೆ ಸಣ್ಣ ಹಗ್ಗವೊಂದನ್ನು ರಥಕ್ಕೆ ಕಟ್ಟಿದರೂ, ಭಕ್ತರಿಗೆ ರಥವನ್ನು ಎಳೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಮುಂಬದಿಯಿಂದ 2 ಕ್ರೇನ್‌, ಹಿಂಬದಿ 2 ಜೆಸಿಬಿಗಳನ್ನು ಬಳಕೆ ಮಾಡಿ ರಥಕ್ಕೆ ಚಾಲನೆ ನೀಡಲಾಯಿತು.

ಇದರಿಂದ 6.40ರಿಂದ 7 ಗಂಟೆಯೊಳಗೆ ಚಾಲನೆ ನೀಡಬೇಕಿದ್ದ ರಥಕ್ಕೆ 9.30ರ ವೇಳೆಗೆ ಚಾಲನೆ ದೊರಕಿತು. 2.30 ತಾಸು ವಿಳಂಬವಾಗಿ ರಥೋತ್ಸವ ಆರಂಭಗೊಂಡಿತು.

ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ರಥ (ಗೌತಮ ರಥ), ಇದರ ಹಿಂದೆ ಚಂಡಿಕೇಶ್ವರಸ್ವಾಮಿ, ಸುಬ್ರಮಣ್ಯಸ್ವಾಮಿ ಮತ್ತು ಕೊನೆಯಲ್ಲಿ ಶ್ರೀ ಪಾರ್ವತಮ್ಮನವರ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಮಧ್ಯಾಹ್ನ 1.30ರ ವೇಳೆಗೆ ಸ್ವಸ್ಥಾನ ಸೇರಿದವು.

ಐದು ರಥಗಳು ರಥದ ಬೀದಿಗಳಲ್ಲಿ ಚಲಿಸುವಾಗ ಭಕ್ತರು ರಥಕ್ಕೆ ಹಣ್ಣು-ದವನ ಎಸೆದು ಹರಕೆ ತೀರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!