
ಆಲಮೇಲ(ಆ.26): ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಹಿರಿಯ ಸಹೋದರ ಯಲ್ಲಪ್ಪ ಹರಿಜನ (64) ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಆಲಮೇಲ ಸಮೀಪದ ಸ್ವಗ್ರಾಮ ಬೊಮ್ಮನಹಳ್ಳಿಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಬೊಮ್ಮನಹಳ್ಳಿ ನಿವಾಸಿಯಾದ ಯಲ್ಲಪ್ಪ ಹರಿಜನ, ಸುಮಾರು 2 ವರ್ಷದಿಂದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ. ಮೃತ ಯಲ್ಲಪ್ಪನಿಗೆ ನಾಲ್ವರು ಪತ್ನಿಯರು, 15 ಜನ ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಭೀಮಾತೀರದ ಹಂತಕ ಎಂಬ ಕುಖ್ಯಾತಿ ಹೊಂದಿದ್ದ ಸಹೋದರ ಚಂದಪ್ಪ ಹರಿಜನ 2000ರಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ನಂತರ 2013ರಲ್ಲಿ ಈತನ ಸಣ್ಣ ತಮ್ಮ ಬಸಪ್ಪ ಹರಿಜನನನ್ನು ಭಾಗಪ್ಪ ಹರಿಜನ ಗ್ಯಾಂಗ್ ಗುಂಡಿಟ್ಟು ಹತ್ಯೆ ಮಾಡಿತ್ತು. ಈಗ ಹಿರಿಯ ಅಣ್ಣ ಯಲ್ಲಪ್ಪ ಅನಾರೋಗ್ಯದಿಂದ ಅಸುನೀಗಿದ್ದಾನೆ. ಇದರೊಂದಿಗೆ ಚಂದಪ್ಪ ಹರಿಜನನ ಎಲ್ಲ ಸಹೋದರರು ಸಾವನ್ನಪ್ಪಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.