
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಆ.12): ವನ್ಯ ಪ್ರಾಣಿಗಳ ತಾಣ ಅಂದ್ರೆ ಅದು ಚಾಮರಾಜನಗರ. ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತಾರಣ್ಯ ಹಾಗೂ ಎರಡು ವನ್ಯಧಾಮ ಹೊಂದಿರುವ ಏಕೈಕ ಜಿಲ್ಲೆ. ಚಾಮರಾಜನಗರ ಹುಲಿಗಳಲ್ಲಿ ಅಷ್ಟೇ ಅಲ್ಲ ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್ 1 ಆಗಿದೆ. ಇಂದು ವಿಶ್ವ ಆನೆ ದಿನಾಚರಣೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಹೌದು ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ. ಚಾಮರಾಜನಗರ ಹುಲಿ,ಚಿರತೆ ಅಷ್ಟೇ ಅಲ್ಲ ಕಾಡಾನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್ 1 ಆಗಿದೆ. 2023 ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದವು. ಚಾಮರಾಜನಗರ ಜಿಲ್ಲೆಯಲ್ಲಿ 2500 ಕ್ಕೂ ಹೆಚ್ಚು ಆನೆಗಳಿತ್ತು. ಅಂದ್ರೆ ಬಂಡೀಪುರದಲ್ಲಿ 1116, ಬಿ.ಆರ್. ಟಿ 619, ಮಹದೇಶ್ವರ ವನ್ಯಧಾಮ 706 ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿದ್ದವು. ಆದ್ರೆ ಇವುಗಳ ಸಂಖ್ಯೆ ಇಂದು ಹೆಚ್ಚಾಗಿದೆ. ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ ಬಂಡೀಪುರದಲ್ಲಿ 1500 ಕ್ಕೂ ಹೆಚ್ಚು, ಮಹದೇಶ್ವರ, ಕಾವೇರಿ,ಬಿಆರ್ ಟಿ ಮೂರು ಸೇರಿ ಅಂದಾಜು 1800 ಕ್ಕೂ ಹೆಚ್ಚು ಆನೆಗಳಿವೆ ಅಂತಾ ಮಾಹಿತಿ ಇದೆ.ರಾಜ್ಯದಲ್ಲಿಯೂ ಕೂಡ ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.ಇನ್ನೂ ಕೂಡ 2025 ರ ವರದಿ ಅಧಿಕಾರಿಗಳ ಕೈ ಸೇರಿಲ್ಲ.
ಇನ್ನೂ ಚಾಮರಾಜನಗರ ಜಿಲ್ಲೆಯ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವು ಕಾರಣವಾಗಿದೆ. ಅಲ್ಲದೇ ಕಾಡಂಚಿನ ಜನರು ಅರಣ್ಯ ಇಲಾಖೆಗೆ ಸಾಕಷ್ಟು ಸಹಕಾರ ಕೊಡ್ತಿದ್ದಾರೆ. ಕಾಡಾನೆ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಕಾರ್ಯಗಳ ಪರಿಣಾಮ ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಕೆ, ಆನೆ ಕಂದಕ ಸೇರಿ ಹಲವು ಯೋಜನೆಗಳ ಪರಿಣಾಮ ಕಾಡಾನೆ ಸಂಖ್ಯೆ ಹೆಚ್ಚಳಕ್ಕೆ ನೆರವಾಗಿದೆ.
ಒಟ್ನಲ್ಲಿ ಆನೆ ಮೃದು ಸ್ವಭಾವದ ಪ್ರಾಣಿ.ಆದ್ರೆ ಯಾರು ಕೆಣಕುತ್ತಾರೋ ಅವರನ್ನು ಸುಮ್ಮನೆ ಬಿಡಲ್ಲ,ಅಟ್ಯಾಕ್ ಮಾಡುತ್ತೆ.ಗಡಿ ಜಿಲ್ಲೆ ಚಾಮರಾಜನಗರ ಅಂದ್ರೆ ಹುಲಿಗಳ ನಾಡು ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಹುಲಿಗಳ ನಾಡಷ್ಟೇ ಅಲ್ಲ ಆನೆಗಳ ಬಿಡೂ ಕೂಡ ಚಾಮರಾಜನಗರ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.