Covid-19 Surge in India : ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಕೇಂದ್ರದ ವಾರ್ನಿಂಗ್!

Suvarna News   | Asianet News
Published : Dec 30, 2021, 07:43 PM IST
Covid-19 Surge in India : ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಕೇಂದ್ರದ ವಾರ್ನಿಂಗ್!

ಸಾರಾಂಶ

ರಾಜ್ಯದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ವೇಗವಾಗಿ ಮಾಡಿ ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರದಿಂದ 8 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ

ನವದೆಹಲಿ (ಡಿ, 30): ದೇಶದಲ್ಲಿ ಹೊಸ ಕೋವಿಡ್-19 (Covid-19 )ಪ್ರಕರಣಗಳ ಸಂಖ್ಯೆಗಳಲ್ಲಿ ಹೆಚ್ಚಳವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ (Central Government), 8 ರಾಜ್ಯಗಳು  (States) ಹಾಗೂ ಕೇಂದ್ರಾಡಳಿತ (UTs) ಪ್ರದೇಶಗಳಿಗೆ ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಲ್ಲಿ ಇರುವಂತೆ ಪತ್ರ ಬರೆದಿದೆ. ಹಾಗೇನಾದರೂ ಹೆಚ್ಚಿನ ಕೇಸ್ ಗಳು ದಾಖಲಾದಲ್ಲಿ ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವಂತೆ ಎಚ್ಚರಿಸಿದೆ. ಕೋವಿಡ್-19 ಹಾಗೂ ಒಮಿಕ್ರಾನ್ (Omicron)ಪ್ರಕರಣಗಳಲ್ಲಿ ದಿನೇ ದಿನೇ ಏರಿಕೆಯನ್ನು ಕಾಣುತ್ತಿರುವ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಹರಿಯಾಣ, ದೆಹಲಿ, ಗುಜರಾತ್, ಜಾರ್ಖಂಡ್, ಕರ್ನಾಟಕ (Karnataka), ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ (Health Secretaries ) ಕೇಂದ್ರದಿಂದ ಪತ್ರ ಬಂದಿದೆ. ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಹಾಗೂ ಪ್ರಕರಣಗಳು ದ್ವಿಗುಣಗೊಳ್ಳುವ ಸಮಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ರಾಜ್ಯಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ (Union Health Secretary Rajesh Bhushan) ಹೇಳಿದ್ದಾರೆ.

ಆಯಾ ರಾಜ್ಯಗಳು ತಮ್ಮ ಪ್ರದೇಶಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡುವುದರೊಂದಿಗೆ, ಆಸ್ಪತ್ರೆಗಳು ಯಾವ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎನ್ನುವ ಮಾಹಿತಿಯನ್ನೂ ಕಲೆಹಾಕಬೇಕು ಎಂದು ತಿಳಿಸಿದೆ. ಅದರೊಂದಿಗೆ ಲಸಿಕೆ ಹಾಕುತ್ತಿರುವ ವೇಗವನ್ನು ಇನ್ನಷ್ಟು ಹೆಚ್ಚು ಮಾಡುವಂತೆ ಈ ರಾಜ್ಯಗಳಿಗೆ ವಿಶೇಷವಾಗಿ ತಿಳಿಸಲಾಗಿದೆ. ಆರ್‌ಟಿ-ಪಿಸಿಆರ್ (RT-PCR) ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ (ಆರ್‌ಎಟಿ) (RAT) ನಡುವಿನ ಅನುಪಾತವನ್ನು ಕಾಪಾಡಿಕೊಳ್ಳುವುದರೊಂದಿಗೆ ಕೇಂದ್ರೀಕೃತ ರೀತಿಯಲ್ಲಿ ಪರೀಕ್ಷೆಯನ್ನು ಹೆಚ್ಚಿಸಲು ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಪಾಸಿಟಿವ್ ಕೇಸ್ ಗಳ ಸಂಪರ್ಕಗಳ್ನು ಪತ್ತೆ ಮಾಡುವುದು ಅವರನ್ನು ಪ್ರತ್ಯೇಕವಾಗಿರುವಂತೆ ಮಾಡುವುದು ಅವರ ಕಾಲಕಾಲಕ್ಕೆ ಅವರ ಪರೀಕ್ಷೆ ಮಾಡುವ ಕೆಲಸವೂ ಆಗಬೇಕು ಎಂದು ತಿಳಿಸಿದೆ.

COVID-19 : ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡ್ರೂ ಬಂತು ಕರೋನಾ!
ಎಲ್ಲಾ ರಾಜ್ಯಗಳಿಗೆ ಕೋವಿಡ್ ಜಾಗರೂಕ ವರ್ತನೆಯನ್ನು ಜಾರಿಗೊಳಿಸುವುದರ ಜೊತೆಗೆ ಕೋವಿಡ್-19 ಲಸಿಕೆ  ಹಾಕುವ ಪ್ರಮಾಣಕ್ಕೆ ಇನ್ನಷ್ಟು ವೇಗ ಬೇಕಿದೆ ಎಂದು ತಿಳಿಸಿದೆ. ಈ ನಡುವೆ ಭಾರತದಲ್ಲಿ ಗುರುವಾರ 24 ಗಂಟೆಗಳ ಅವಧಿಯಲ್ಲಿ 13,154 ಹೊಸ ಕೋವಿಡ್ ಪ್ರಕರಣಗಳು ಮತ್ತು 268 ಸಾವುಗಳು ದಾಖಲಾಗಿವೆ. ಹೊಸ ಸಾವಿನ ಸೇರ್ಪಡೆಯೊಂದಿಗೆ, ಒಟ್ಟು ಸಾವಿನ ಸಂಖ್ಯೆ 4,80,860 ಕ್ಕೆ ತಲುಪಿದೆ. ದೇಶದಾದ್ಯಂತ ಒಮಿಕ್ರಾನ್ ಸೋಂಕಿನ ಸಂಖ್ಯೆ 961 ಕ್ಕೆ ಏರಿದೆ. ಆದಾಗ್ಯೂ, ಒಟ್ಟು ಒಮಿಕ್ರಾನ್ ಪಾಸಿಟಿವ್‌ನಲ್ಲಿ 320 ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 22 ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Omicron Threat : ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ ಎಂದ INSACOG
ಕಳೆದ 33 ದಿನಗಳಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 10 ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಕಳೆದ 24 ಗಂಟೆಗಳಲ್ಲೇ 13 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಆ ಕಾರಣದಿಂದ ಎಲ್ಲಾ ರಾಜ್ಯಗಳು ಅಲರ್ಟ್ ಆಗಿರಬೇಕು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಹೇಳಿದ್ದಾರೆ. 
ಇನ್ನೂ ಕರ್ನಾಟಕದ ಬೆಂಗಳೂರಿನಲ್ಲಿ (Bengaluru) ಮೂರೂವರೆ ತಿಂಗಳ ಬಳಿಕ ಅತ್ಯಧಿಕ ಕೊರೋನಾ(Coronavirus) ಸೋಂಕಿನ ಪ್ರಕರಣಗಳು ಬುಧವಾರ ಪತ್ತೆಯಾಗಿವೆ. ಒಂದೇ ದಿನ 400 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ(Death). ಸೆ.15ರಂದು 462 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದವು. ನಂತರ ಕೊರೋನಾ ಸೋಂಕು ನಿಯಂತ್ರಣದಲ್ಲಿತ್ತು. ಇದೀಗ ನಿಧಾನವಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ