London: ಅಡ್ಡ ಸಿಕ್ಕ ಮಗುವನ್ನು ತುಳಿದುಕೊಂಡು ಹೋದ Queen's guard

Suvarna News   | Asianet News
Published : Dec 30, 2021, 07:25 PM IST
London: ಅಡ್ಡ ಸಿಕ್ಕ ಮಗುವನ್ನು ತುಳಿದುಕೊಂಡು ಹೋದ  Queen's guard

ಸಾರಾಂಶ

ಅಡ್ಡ ಸಿಕ್ಕ ಮಗುವನ್ನು ತುಳಿದುಕೊಂಡು ಹೋದ ಕ್ವೀನ್ಸ್‌ ಗಾರ್ಡ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸೆಕ್ಯೂರಿಟಿ ಗಾರ್ಡ್‌ ವರ್ತನೆಗೆ ಆಕ್ರೋಶ

ಲಂಡನ್‌(ಡಿ.30): ಬ್ರಿಟಿಷ್‌ ರಾಜ ಮನೆತನದವರಿಗೆ ಭದ್ರತೆ ಒದಗಿಸುವ ಕ್ವೀನ್ಸ್‌ ಗಾರ್ಡ್‌ ಸೆಕ್ಯೂರಿಟಿ ಗಾರ್ಡ್‌ಗಳು ಪಥಸಂಚಲನದ ವೇಳೆ ಅಡ್ಡ ಸಿಕ್ಕಿದ ಮಗುವನ್ನು ತುಳಿದುಕೊಂಡು ಹೋದ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಸೆಕ್ಯೂರಿಟಿ ಗಾರ್ಡ್‌ಗಳ ಕ್ರೂರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಲಂಡನ್ ಲಂಡನ್‌ ಟವರ್‌ ಮುಂದೆ ಸೆರೆಹಿಡಿಯಲಾದ ವಿಡಿಯೋ ಇದಾಗಿದೆ. ಕ್ವೀನ್ಸ್ ಗಾರ್ಡ್‌ (Queen's guard)ಗಳಿಗೆ ಬ್ರಿಟಿಷ್ ರಾಜಮನೆತನಕ್ಕೆ ಭದ್ರತೆಯನ್ನು ಒದಗಿಸುವ ಕರ್ತವ್ಯವನ್ನು ವಹಿಸಲಾಗಿದೆ ಮತ್ತು ಬ್ರಿಟನ್‌ನಾದ್ಯಂತ ರಾಜಮನೆತನದ ನಿವಾಸಗಳಲ್ಲಿ ನೆಲೆಸಿರುವವರಿಗೆ ಇವರು ಭದ್ರತೆ ನೀಡುತ್ತಾರೆ. 

ಅನಾಮಧೇಯ ಟಿಕ್‌ಟಾಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ಈಗ ಎಲ್ಲಾ ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ವೈರಲ್‌ ಆಗುತ್ತಿದೆ.  ಅಲ್ಲದೇ ನೆಟ್ಟಿಗರು ಸೆಕ್ಯೂರಿಟಿ ಗಾರ್ಡ್‌ಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕ್ವೀನ್ಸ್ ಗಾರ್ಡ್‌ಗಳಿಗೆ ಬ್ರಿಟಿಷ್ ರಾಜಮನೆತನಕ್ಕೆ ಭದ್ರತೆಯನ್ನು ಒದಗಿಸುವ ಕರ್ತವ್ಯವನ್ನು ವಹಿಸಲಾಗಿದೆ ಹಾಗೂ ಬ್ರಿಟನ್‌ನಾದ್ಯಂತ  ಇರುವ ರಾಜಮನೆತನದ ನಿವಾಸಗಳಿಗೆ ಇವರು ಭದ್ರತೆ ಒದಗಿಸುತ್ತಾರೆ. 

 

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಪ್ರವಾಸಿಗರಿಂದ ತುಂಬಿದ ರಸ್ತೆಯಲ್ಲಿ ಪಥಸಂಚಲನ  ಮಾಡುವುದನ್ನು ಕಾಣಬಹುದು. ವೀಡಿಯೋ ಮುಂದುವರೆದಂತೆ, ಒಬ್ಬ  ಪುಟ್ಟ ಬಾಲಕ ಈ ಸೆಕ್ಯೂರಿಟಿ ಗಾರ್ಡ್‌ಗಳು ಬರುತ್ತಿರುವ ದಾರಿಯಲ್ಲಿ ಮುಗ್ಗರಿಸುತ್ತಾನೆ. ಆದರೂ ಆತನನ್ನು ಮೇಲೇಳಿಸದೇ  ಸೆಕ್ಯೂರಿಟಿ ಗಾರ್ಡ್‌ಗಳು ಆತನನ್ನು ದಾಟಿಕೊಂಡೆ ಸೀದಾ ಮುಂದೆ ಸಾಗುತ್ತಾರೆ.  ಈ ವಿಡಿಯೋವನ್ನು 2.2 ಮಿಲಿಯನ್ ಜನ ವೀಕ್ಷಿಸಿದ್ದು, ಸೆಕ್ಯೂರಿಟಿ ಗಾರ್ಡ್‌ಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಡೈಲಿಮೇಲ್‌ ( DailyMail) ವರದಿಯ ಪ್ರಕಾರ, ಕ್ವೀನ್ಸ್ ಗಾರ್ಡ್‌ಗಳು ತಮ್ಮ ಪಥಸಂಚಲನದ  ಮಾರ್ಗದಲ್ಲಿ ಅಡೆತಡೆಗಳು ಎದುರಾಗದಿರಲು ಮೊದಲೇ ನಿರ್ದಿಷ್ಟ ಆದೇಶಗಳನ್ನು ನೀಡುತ್ತಾರೆ. 'ಕ್ವೀನ್ಸ್ ಗಾರ್ಡ್ಸ್‌ಗೆ ದಾರಿ ಮಾಡಿಕೊಡಿ' ಎಂದು ಅವರು ಕೂಗುತ್ತಾರೆ. ಅಲ್ಲದೇ ಜೋರಾಗಿ ಕಾಲ(ಪಾದವನ್ನು)ನ್ನು ನೆಲಕ್ಕೆ ಬಡಿಯುವ ಅವಕಾಶ ಅವರಿಗೆ ಇದೆ. 

Jallianwala Bagh: ಜಲಿಯನ್‌ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್‌ ರಾಣಿ ಹತ್ಯೆ ಬೆದರಿಕೆ!

ಇಲ್ಲೂ ಕೂಡ ಗಸ್ತು ಸಮೀಪಿಸುತ್ತಿದೆ ಎಂದು ಕರ್ತವ್ಯದಲ್ಲಿದ್ದ ಕಾವಲುಗಾರರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಮಗುವೊಂದು ಅನಿರೀಕ್ಷಿತವಾಗಿ ಅವರ ಪಥಸಂಚಲನದ ಮುಂದೆ ಬಂದಿದ್ದು, ಕಾವಲುಗಾರ ಬಹುತೇಕ ಮಗುವಿನ ಮೇಲೆ ಹೆಜ್ಜೆ ಇಡುವವನಿದ್ದು, ತೊಡರಿಕೊಂಡು ಮುಂದೇ ಸಾಗಿದ್ದಾನೆ.  ಈ ಘಟನೆಯ ಬಳಿಕ ಆತ ಮಗುವನ್ನು ಪರೀಕ್ಷಿಸಿದ್ದಾನೆ ಮತ್ತು ಮಗು ಚೆನ್ನಾಗಿದೆ ಎಂಬುದು ತಿಳಿದು ಬಂದಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ (Ministry of Defence)ದ ವಕ್ತಾರರು ತಿಳಿಸಿದ್ದಾರೆ. 
ಕ್ವೀನ್ಸ್ ಗಾರ್ಡ್‌ಗಳು 1660 ರಿಂದ ರಾಜಮನೆತನದ ಭದ್ರತೆಯನ್ನು ನೋಡಿಕೊಳ್ಳುತ್ತಾರೆ. ಅವರು ಕೆಂಪು ಟ್ಯೂನಿಕ್ಸ್ ಮತ್ತು ಕರಡಿ ಟೋಪಿಗಳನ್ನು ಧರಿಸುತ್ತಾರೆ ಮತ್ತು ಚಳಿಗಾಲದಲ್ಲಿ ಅವರು ಉದ್ದವಾದ ಬೂದು ಬಣ್ಣದ ಕೋಟ್‌ಗಳನ್ನು ಧರಿಸುತ್ತಾರೆ. ಈ ಉಡುಗೆ ಅವರನ್ನು ಸಾರ್ವಜನಿಕವಾಗಿ ಜನರು  ಗುರುತಿಸುವಂತೆ ಮಾಡುತ್ತದೆ. 

ಮೊದಲ ಬ್ರಿಟಿಷ್ ಹಡಗು ಬಂದು 400 ವರ್ಷ: ಕೊನೆಗೂ ಬಾರ್ಬಡೋಸ್‌ ಗಣರಾಜ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ