
ನವದೆಹಲಿ : ತ್ರಿವಳಿ ತಲಾಖನ್ನು ವಿರೋಧಿಸಿದ ಮಾದರಿಯಲ್ಲೇ ಮುಸ್ಲಿಂ ಸಮುದಾಯದಲ್ಲಿರುವ ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಕಾನೂನು ಸಚಿವಾಲಯದ ಮೂಲಗಳು ಸಿಎನ್‌ಎನ್-ನ್ಯೂಸ್ 18 ಸುದ್ದಿವಾಹಿನಿಗೆ ಈ ವಿಷಯ ತಿಳಿಸಿದ್ದು, ತ್ರಿವಳಿ ತಲಾಖ್ ವೇಳೆ ತಳೆದ ನಿಲುವನ್ನೇ ನಿಖಾ ಹಲಾಲಾ ಮತ್ತು ಬಹುಪತ್ನಿತ್ವ ವಿಷಯದಲ್ಲಿ ತಳೆಯಲಾಗುತ್ತದೆ. ಈ ಕುರಿತು ಸಲ್ಲಿಸಬೇಕಿರುವ ಪ್ರತಿಕ್ರಿಯೆಯೂ ಸಿದ್ಧವಿದೆ ಎಂದು ತಿಳಿಸಿವೆ.
ಈ ಎರಡೂ ಸಾಮಾಜಿಕ ಪದ್ಧತಿಗಳ ವಿರುದ್ಧ ಬಿಜೆಪಿ ಮುಖಂಡ ಅಶ್ವನಿ ಉಪಾಧ್ಯಾಯ ಹಾಗೂ ಕೆಲವು ಮುಸ್ಲಿಂ ಮಹಿಳಾ ಸಂತ್ರಸ್ತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ
ದೀಪಕ್ ಮಿಶ್ರಾ, ನ್ಯಾ. ಎ.ಎಂ. ಖಾನ್ವಿಲ್ಕರ್ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಕೈಗೆತ್ತಿಕೊಳ್ಳಲಿದೆ. ಈ ಹಿಂದೆ ತ್ರಿವಳಿ ತಲಾಖ್ ವಿಚಾರಣೆ ವೇಳೆ, ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ವಿಷಯಗಳ ವಿಚಾರಣೆಗೆ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ. ಜೆ.ಎಸ್. ಖೇಹರ್ ನಿರಾಕರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.