ಶೀಘ್ರದಲ್ಲೇ 100ರೂ ನಾಣ್ಯ : 5,10 ರೂ ನಾಣ್ಯಗಳಿಗೂ ಹೊಸ ಟಚ್

Published : Sep 12, 2017, 11:30 PM ISTUpdated : Apr 11, 2018, 01:06 PM IST
ಶೀಘ್ರದಲ್ಲೇ 100ರೂ ನಾಣ್ಯ : 5,10 ರೂ ನಾಣ್ಯಗಳಿಗೂ ಹೊಸ ಟಚ್

ಸಾರಾಂಶ

ಇದೇ ವೇಳೆ, 5 ರು. ಹಾಗೂ 10 ರು. ನಾಣ್ಯಗಳನ್ನು ಇದೇ ದಿಗ್ಗಜರ ಸ್ಮರಣಾರ್ಥ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲೂ ಅದು ನಿರ್ಧರಿಸಿದೆ. ಆದರೆ ಹಳೆಯ 5 ಹಾಗೂ 10 ರು. ನಾಣ್ಯಗಳ ಚಲಾವಣೆ ಅಬಾಧಿತವಾಗಿ ಮುಂದುವರಿಯಲಿದೆ.

ನವದೆಹಲಿ(ಸೆ.12):  ಖ್ಯಾತ ಸಂಗೀತ ವಿದುಷಿ ಎಂ.ಎ. ಸುಬ್ಬುಲಕ್ಷ್ಮಿ ಹಾಗೂ ತಮಿಳುನಾಡಿನ ರಾಜಕಾರಣಿ ಡಾ. ಎಂ.ಜಿ. ರಾಮಚಂದ್ರನ್ ಅವರ ಜನ್ಮಶತಮಾನೋತ್ಸವ ನಿಮಿತ್ತ 100ರು. ಹೊಸ ನಾಣ್ಯ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನಾಣ್ಯ ಕಾಯ್ದೆ-2011ಕ್ಕೆ ತಿದ್ದುಪಡಿ ಮಾಡಲು ಅದು ನಿರ್ಧರಿಸಿದೆ.

ಇದೇ ವೇಳೆ, 5 ರು. ಹಾಗೂ 10 ರು. ನಾಣ್ಯಗಳನ್ನು ಇದೇ ದಿಗ್ಗಜರ ಸ್ಮರಣಾರ್ಥ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲೂ ಅದು ನಿರ್ಧರಿಸಿದೆ. ಆದರೆ ಹಳೆಯ 5 ಹಾಗೂ 10 ರು. ನಾಣ್ಯಗಳ ಚಲಾವಣೆ ಅಬಾಧಿತವಾಗಿ ಮುಂದುವರಿಯಲಿದೆ.

100 ರು. ನಾಣ್ಯದಲ್ಲಿ ಅಶೋಕಸ್ತಂಭ ಇರಲಿದೆ. ಜತೆಗೆ ಸತ್ಯಮೇವ ಜಯತೆ ಎಂದು ಬರೆಯಲಾಗಿರುತ್ತದೆ. ದೇವನಾಗರಿಯಲ್ಲಿ ಭಾರತ ಎಂದು, ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗುತ್ತದೆ. ರುಪಾಯಿ ಚಿಹ್ನೆ (₹), 100 ಎಂಬ ಅಂಕಿ ಇರಲಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಚಿತ್ರ ಕೆಲ ನಾಣ್ಯಗಳಲ್ಲಿ ಇರಲಿದ್ದು, ಅವರ ಜನ್ಮಶತಮಾನೋತ್ಸವ (1912-2016) ಎಂದು ಬರೆಯಲಾಗಿರುತ್ತದೆ. ಇನ್ನು ಕೆಲವು ನಾಣ್ಯಗಳಲ್ಲಿ ಎಂಜಿಆರ್ ಚಿತ್ರ ಇರಲಿದ್ದು, (1917-2017) ಎಂದು ಬರೆಯಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ
ಸೋಮೇಶ್ವರ ಬೀಚ್‌ ಈಗ ಇನ್ನಷ್ಟು ಸ್ವಚ್ಛ- ಸುಂದರ!