
ನವದೆಹಲಿ (ಸೆ.12): ನಮ್ಮ ಸಂಘಟನೆ ಟ್ರೋಲಿಂಗ್ ಮಾಡುವುದನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದನ್ನು ನಾವೆಂದೂ ಬೆಂಬಲಿಸುವುದಿಲ್ಲವೆಂದು ಆರ್’ಎಸ್’ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮೋಹನ್ ಭಾಗವತ್ ವಿದೇಶಿ ರಾಜತಾಂತ್ರಿಕರ ಜೊತೆ ಸಂವಾದ ಮಾಡುತ್ತಾ ಆರ್’ಎಸ್’ಎಸ್’ಗೆ ಯಾರಿಗೂ ತಾರತಮ್ಯ ಮಾಡುವುದಿಲ್ಲ. ದರಲ್ಲಿ ನಮಗೆ ನಂಬಿಕೆಯೂ ಇಲ್ಲ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ನಾವು ಬೇರೆ ಬೇರೆ ಕ್ಷೇತ್ರಗಳಲ್ಲಿ ಆರ್’ಎಸ್ಎಸ್ 1.70 ಲಕ್ಷ ಸೇವಾ ಯೋಜನೆಗಳನ್ನು ನಡೆಸುತ್ತಿದೆ.ಇದನ್ನು ನೋಡಲು ನೀವೂ ಬನ್ನಿ ಎಂದು ಭಾಗವತ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಆರ್’ಎಸ್’ಎಸ್ ಹಾಗೂ ಬಿಜೆಪಿ ನಡುವಿನ ಸಂಬಂಧದ ಬಗ್ಗೆ ಪುನರುಚ್ಚಿಸಿದ್ದಾರೆ. ಪಕ್ಷದ ಯಾವುದೇ ವಿಚಾರದಲ್ಲಿ ಆರ್’ಎಸ್’ಎಸ್ ಮೂಗು ತೂರಿಸುವುದಿಲ್ಲ. ಸಂಘ-ಪರಿವಾರ ಬಿಜೆಪಿಯನ್ನು ಮುನ್ನಡೆಸುತ್ತಿಲ್ಲ. ಅದೇ ರೀತಿ ಬಿಜೆಪಿ ಆರ್’ಎಸ್ಎಸ್ ಅನ್ನು ಮುನ್ನಡೆಸುತ್ತಿಲ್ಲ. ನಾವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.