ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ: ಮತ್ತೆ ದುಬಾರಿಯಾಯ್ತು ಸಬ್ಸಿಡಿ ಸಿಲಿಂಡರ್

Published : Dec 02, 2016, 03:09 AM ISTUpdated : Apr 11, 2018, 01:12 PM IST
ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ: ಮತ್ತೆ ದುಬಾರಿಯಾಯ್ತು ಸಬ್ಸಿಡಿ ಸಿಲಿಂಡರ್

ಸಾರಾಂಶ

ದೇಶಾದ್ಯಂತ ನೋಟು ರದ್ದು ಕ್ರಮದಿಂದ ತೊಂದರೆಗೊಳಗಾಗಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ ಕೇಂದ್ರ ಸರ್ಕಾರ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು  ಕೆಜಿ ಸಿಲಿಂಡರ್​ ಅನಿಲಕ್ಕೆ 2 ರೂ 7 ಪೈಸೆ  ಏರಿಕೆ ಮಾಡಿವೆ. ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದೆ. ಪ್ರತಿ ಸಿಲಿಂಡರ್ ಕೆಜಿಗೆ 2 ರೂಪಾಯಿ 07 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಯಾಗಿದೆ.

ನವದೆಹಲಿ(ನ.02): ದೇಶಾದ್ಯಂತ ನೋಟು ರದ್ದು ಕ್ರಮದಿಂದ ತೊಂದರೆಗೊಳಗಾಗಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ ಕೇಂದ್ರ ಸರ್ಕಾರ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು  ಕೆಜಿ ಸಿಲಿಂಡರ್​ ಅನಿಲಕ್ಕೆ 2 ರೂ 7 ಪೈಸೆ  ಏರಿಕೆ ಮಾಡಿವೆ.

ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದೆ. ಪ್ರತಿ ಸಿಲಿಂಡರ್ ಕೆಜಿಗೆ 2 ರೂಪಾಯಿ 07 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಯಾಗಿದೆ.

ಸಬ್ಸಿಡಿ ಸಿಲಿಂಡರ್ ದರದಲ್ಲಿ ಏರಿಕೆ!

ಸಬ್ಸಿಡಿ ಸಿಲಿಂಡರ್ ಎಷ್ಟೆಷ್ಟು ಏರಿಕೆಯಾಗಿದೆ ಅಂತಾ ನೋಡುವುದಾದರೆ, 14.2 ಕೆಜಿ ಸಬ್ಸಿಡಿ ಸಿಲಿಂಡರ್ ಈ ಮೊದಲು 540 ರೂಪಾಯಿ ಇತ್ತು. ಈಗ ದರ 595 ರೂಪಾಯಿಗೆ ಏರಿಕೆ ಆಗಿದೆ.ಅಂದರೆ 55 ರೂಪಾಯಿ ಹೆಚ್ಚಳವಾಗಿದೆ. ಇನ್ನೂ ವಾಣಿಜ್ಯ ಸಿಲಿಂಡರ್​ ಬೆಲೆ ಈ ಹಿಂದೆ 1092 ರೂಪಾಯಿ ಇತ್ತು. ಆದರೆ ಈಗ 1186 ರೂಪಾಯಿಗೆ ಏರಿಕೆಯಾಗಿದೆ. ಅಂದರೆ  94 ರೂಪಾಯಿ 50 ಪೈಸೆ ಹೆಚ್ಚಳವಾಗಿದೆ. ಎಲ್ಲಾ ತೆರಿಗೆ ಸೇರಿಸಿ ಈ ದರ ನಿಗದಿ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಕಂಪನಿಗಳು ಈ ಬೆಲೆ ಏರಿಕೆ ಮಾಡಿದ್ದು, ಜಾಗತಿಕ ಮಾರುಕಟ್ಟೆ ದರದ ಆಧಾರದ ಮೇಲೆ ಬೆಲೆಯಲ್ಲಿ ಏರಿಳಿತ ವಾಗುತ್ತಂತೆ.

ಇನ್ನೂ ವಿಮಾನ ಇಂಧನ ದರದಲ್ಲಿ ಶೇ. 3.7 ರಷ್ಟು ಇಳಿಕೆಯಾಗಿದ್ದು ಇಂದಿನಿಂದಲೇ ಈ ಪರಿಸ್ಕೃತ ದರ ಜಾರಿಯಾಗಲಿದೆ. ಆದರೆ , ಸಿಲಿಕಾನ್ ಸಿಟಿಯಂತ ದುಬಾರಿ ನಗರದಲ್ಲಿ ಮೊದಲೇ ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದ ಮಧ್ಯಮ ವರ್ಗದವರಿಗೆ ಸಿಲಿಂಡರ್​ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು