Fake News, Anti-India Propaganda : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್!

Suvarna News   | Asianet News
Published : Dec 21, 2021, 10:54 PM ISTUpdated : Dec 22, 2021, 10:11 AM IST
Fake News, Anti-India Propaganda : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್!

ಸಾರಾಂಶ

ಸುಳ್ಳು ಸುದ್ದಿ, ದೇಶ ವಿರೋಧಿ ಚಟುವಟಿಕೆ ಇದೇ ಮೊದಲ ಬಾರಿಗೆ ವೆಬ್ ಸೈಟ್ ನಿಷೇಧ ಮಾಡಿದ  ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ದೇಶ ವಿರೋಧಿ ಕೃತ್ಯ, ಸುಳ್ಳು ಸುದ್ದಿ ಪ್ರಸಾರ ಮಾಡಿದರೆ ಸರ್ಕಾರದಿಂದ ಕಠಿಣ ಕ್ರಮ

ನವದೆಹಲಿ (ಡಿ. 21): ಕಾಶ್ಮೀರ (Kashmir) ಕುರಿತಾಗಿ ಇದ್ದ ಎರಡು ವೆಬ್ ಸೈಟ್ ಗಳು (Website) ಹಾಗೂ 20 ಯೂಟ್ಯೂಬ್ (YouTube)ಚಾನೆಲ್ ಗಳನ್ನು ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಹೊಸ ಮಾಹಿತಿ ಹಾಗೂ ತಂತ್ರಜ್ಞಾನ ನಿಯಮದ (New Information Technology Rules) ಅಡಿಯಲ್ಲಿ ನಿಷೇಧಿಸಲಾಗಿದೆ (Block) ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ (Ministry of Information and Broadcasting ) ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನದಿಂದ (Pakistan)ಕಾರ್ಯನಿರ್ವಹಿಸುತ್ತಿರುವ ತಪ್ಪು ಮಾಹಿತಿ ಜಾಲದ ಅಡಿಯಲ್ಲಿ ಈ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳು ಸಂಯೋಜಿತವಾಗಿದ್ದು ಆ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುವ ವೆಬ್ ಸೈಟ್ ಗಳ ವಿರುದ್ಧವೂ ಕೇಂದ್ರ ಕರಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. 

ಫೆಬ್ರವರಿ 25 ರಂದು ಜಾರಿಗೆ ಬಂದ ಹೊಸ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಈ ಆದೇಶ ನೀಡಿದೆ ಎಂದು ತಿಳಿಸಿದೆ. ಗುಪ್ತಚರ ಇಲಾಖೆಗಳೊಂದಿಗೆ ಚರ್ಚಿಸಿ ಅವರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಂಡಿದ್ದಾಗಿ ಸಚಿವ ಅನುರಾಗ್ ಠಾಕೂರ್ (I&B minister Anurag Thakur) ವಿವರಣೆ ನೀಡಿದ್ದಾರೆ. "ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿನ ಅಲ್ಪ ಸಂಖ್ಯಾತ ಸಮುದಾಯಗಳು, ರಾಮಮಂದಿರ, ಜನರಲ್ ಬಿಪಿನ್ ರಾವತ್ ಕುರಿತಾಗಿ ಸಂಘಟಿತ ರೀತಿಯಲ್ಲಿ ದೇಶ ವಿರೋಧಿ ವಿಷಯಗಳನ್ನು ಪೋಸ್ಟ್ ಮಾಡಲು ಈ ಚಾನೆಲ್ ಗಳನ್ನು ಬಳಸಲಾಗಿದೆ' ಎಂದು ಹೇಳಿದ್ದಾರೆ.

ದೇಶದಲ್ಲಿ ಸುಳ್ಳು ಹಾಗೂ ಭಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಗಡಿಯಿಂದಾಚೆಗೆ ಇರುವ ಪ್ರದೇಶ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ದೇಶವಿರೋಧಿ ಕೃತ್ಯ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡಿದ ಕಾರಣಕ್ಕಾಗಿ ಕೆಲ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಯಾ ಪಾಕಿಸ್ತಾನ್ ಗ್ರೂಪ್ (ಎನ್ ಪಿಜಿ) (Naya Pakistan Group) ನಡೆಸುತ್ತಿದ್ದ 20 ಯೂಟ್ಯೂಬ್ ಚಾನೆಲ್ ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ವಿವರಿಸಿದ್ದಾರೆ. 

Clean India: ಕಸ ಆಯ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಿಂಗಳಿಗೆ 75ಕೆಜಿಯ ಟಾರ್ಗೆಟ್!
ದಿ ಪಂಚ್ ಲೈನ್, ಇಂಟರ್ ನ್ಯಾಷನಲ್ ವೆಬ್ ನ್ಯೂಸ್, ಖಲ್ಸಾ ಟಿವಿ, ದ ನೇಕೆಡ್ ಟ್ರುಥ್, ನ್ಯೂಸ್ 24, 48 ನ್ಯೂಸ್, ಹಿಸ್ಟಾರಿಕಲ್ ಫ್ಯಾಕ್ಟ್ಸ್, ಪಂಜಾಬ್ ವೈರಲ್, ನಯಾ ಪಾಕಿಸ್ತಾನ ಗ್ಲೋಬಲ್ ಮತ್ತು ಕವರ್ ಸ್ಟೋರಿ ಸೇರಿದಂತೆ ಇತರ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳನ್ನು ಸರ್ಕಾರ ನಿಷೇಧಿಸಿದೆ. ಬಹುತೇಕ ಎಲ್ಲಾ ವೆಬ್ ಸೈಟ್ ಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಮೂಲದ ನ್ಯೂಸ್ ಚಾನೆಲ್ ಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವುದಾಗಿದೆ. ಒಟ್ಟಾರೆ ಈ 20 ಯೂ ಟ್ಯೂಬ್ ಚಾನೆಲ್ ಗಳಿಗೆ 35 ಲಕ್ಷ ಫಾಲೋವರ್ಸ್ ಗಳಿದ್ದು, ಇಲ್ಲಿನ ವಿಡಿಯೋಗಳಿಗೆ 56 ಕೋಟಿ ವೀವ್ಸ್ ಗಳು ಬಂದಿವೆ. ಈ ವೆಬ್ ಸೈಟ್ ಹಾಗೂ ಯೂ ಟ್ಯೂಬ್ ಚಾನೆಲ್ ಗಳ ಕುರಿತಾಗಿ ತನಿಖೆಗೂ ಆದೇಶಿಸಲಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. 

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌
ಕಾಶ್ಮೀರ್ ಗ್ಲೋಬಲ್ (Kashmir Global) ಹಾಗೂ ಕಾಶ್ಮೀರ್ ವಾಚ್ (Kashmir Watch)ನಿಷೇಧವಾಗಿರುವ ವೆಬ್ ಸೈಟ್ ಗಳಾಗಿದೆ. ಅದಲ್ಲದೆ, ತನ್ನ ಪ್ರಕಟಣೆಯಲ್ಲಿ ಈ ವೆಬ್ ಸೈಟ್ ಹಾಗೂ ಯೂ ಟ್ಯೂಬ್ ಚಾನೆಲ್ ಗಳು ಪ್ರಸಾರ ಮಾಡಿರುವ ದೇಶ ವಿರೋಧಿ ಬರಹಗಳು ಹಾಗೂ ವಿಡಿಯೋಗಳನ್ನೂ ಕೂಡ ಸಚಿವಾಲಯ ಸಾರ್ವಜನಿಕವಾಗಿ ನೀಡಿದೆ.  ದಿ ಪಂಚ್ ಲೈನ್ ಯೂ ಟ್ಯೂಬ್ ಚಾನೆಲ್ ತನ್ನ ವರದಿಯಲ್ಲಿ, ಕಾಶ್ಮೀರ್ ಮುಜಾಹಿದ್ದೀನ್ ಭಾರತದ 20 ಆರ್ಮಿ ಜನಲರ್ ಅನ್ನು ತರಬೇತಿ ಶಿಬಿರದಲ್ಲಿ ಹತ್ಯೆ ಮಾಡಿದೆ ಎಂದು ವರದಿ ಮಾಡಿದ್ದರೆ, ಇದೇ ಚಾನೆಲ್ ನ ಇನ್ನೊಂದು ವರದಿಯಲ್ಲಿ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್, ಅಯೋಧ್ಯೆಯಲ್ಲಿ ರಾಮಮಂದಿರದ ಬದಲಿಗೆ ಮಸೀದಿಯನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದೆ. ಇನ್ನೊಂದು ನಯಾ ಪಾಕಿಸ್ತಾನ ಗ್ಲೋಬಲ್ ಚಾನೆಲ್ ತನ್ನ ವರದಿಯಲ್ಲಿ ಉತ್ತರ ಕೊರಿಯಾ ನಾಯಕ ಕಿನ್ ಜಾಂಗ್ ಉನ್, ತನ್ನ ಸೇನೆಯನ್ನು ಅಯೋಧ್ಯೆಗೆ ಕಳಿಸಿದ್ದಾರೆ ಎಂದು ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್