ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು!

By Web Desk  |  First Published Dec 28, 2018, 6:23 PM IST

ಬಾಹ್ಯಾಕಾಶದಲ್ಲಿ ತೇಲಲಿದ್ದಾರೆ ಭಾರತದ ಮೂವರು ಗಗನಯಾತ್ರಿಗಳು| ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ| ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಮೂವರು ಗಗನಯಾತ್ರಿಗಳು| ವಾಯುಪಡೆಯಿಂದ ಗಗನಯಾತ್ರಿಗಳ ಆಯ್ಕೆ| 2022ರಲ್ಲಿ ಗಗನಯಾನ ಯೋಜನೆಗೆ ಚಾಲನೆ


ನವದೆಹಲಿ(ಡಿ.28): ಮೂವರು ಗಗನಯಾತ್ರಿಗಳನ್ನು ಏಳು ದಿನಗಳ ಕಾಲ  ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ  ಕಾನೂನು ಸಚಿವ  ರವಿಶಂಕರ್ ಪ್ರಸಾದ್,  ಈ ಯೋಜನೆಗಾಗಿ 10 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು. 

Latest Videos

undefined

ಈ ಯೋಜನೆಯನ್ನು 2022ರೊಳಗೆ ಪೂರ್ಣಗೊಳಿಸುವುದಾಗಿ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾತ್ರಿಗಳನ್ನು ವಾಯುಪಡೆಯಿಂದ ಆಯ್ಕೆ ಮಾಡಲಾಗುತ್ತಿದೆ.

Cabinet approves indigenous human spaceflight programme; Gaganyaan programme to carry 3 member crew for minimum 7 days in space at a total cost of Rs 10k crores.

— ANI (@ANI)

ಗಗನಯಾತ್ರಿಗಳ ಆಯ್ಕೆಯಲ್ಲಿ ವಾಯುಪಡೆ ಸಂಪೂರ್ಣ ಅಧಿಕಾರ ವಹಿಸಿರುವುದಾಗಿ ಇಸ್ರೋ ಅಧ್ಯಕ್ಷ ಡಾ. ಶಿವಾನ್ ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷೆ ಯೋಜನೆಗಾಗಿ  ನೆರವು ಪಡೆಯಲು ಫ್ರಾನ್ಸ್ ಹಾಗೂ ರಷ್ಯಾ ರಾಷ್ಟ್ರಗಳೊಂದಿಗೆ ಭಾರತ ಈಗಾಗಲೇ  ಒಪ್ಪಂದ ಮಾಡಿಕೊಂಡಿದೆ. 

ಜಿಎಸ್‌ಎಲ್‌ವಿ ಮಾರ್ಕ್ -3  ನೌಕೆ ಮೂಲಕ ಮೂವರು  ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

click me!