ಮಂತ್ರಿಗಿರಿ ನನಗೆ ಪುಟಗೋಸಿ.. ಬಹಿರಂಗವಾಗಿ ಬನ್ನಿ ಕಾಂಗ್ರೆಸ್‌ಗೆ ರೇವಣ್ಣ ಸವಾಲ್!

By Web DeskFirst Published Dec 28, 2018, 4:52 PM IST
Highlights

ಗೃಹ ಸಚಿವ ಸ್ಥಾನವನ್ನು ಪರಮೇಶ್ವರ ಅವರ ಕೈಯಿಂದ ಕಿತ್ತುಕೊಂಡು ಎಮ್‌.ಬಿ ಪಾಟೀಲರಿಗೆ ನೀಡಿರುವುದಕ್ಕೆ ದೋಸ್ತಿ ಸರಕಾರದ ಪ್ರಭಾವಿ ಸಚಿವ, ಸಿಎಂ ಕುಮಾರಸ್ವಾಮಿ ಅವರ ಸಹೋದರ ಎಚ್‌.ಡಿ.ರೇವಣ್ಣ ಅವರೇ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು(ಡಿ.28)  ಡಿಸಿಎಂ ಪರಮೇಶ್ವರ ಅವರಿಂದ ಗೃಹ ಖಾತೆಯನ್ನು ಹಿಂದಕ್ಕೆ ಪಡೆದುಕೊಳ್ಳಬಾರದಿತ್ತು. ದಲಿತ ನಾಯಕನನ್ನು ಹುದ್ದೆಯಿಂದ ತೆಗೆಯಬಾರದಿತ್ತು.  ಆರು ತಿಂಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮುಂದುವರೆಸಿದ್ದರೆ ಲೋಕಸಭೆ‌ ಚುನಾವಣೆಗೆ ಅನುಕೂಲ ಆಗುತ್ತಿತ್ತು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ಅಭಿಪ್ರಾಯ ಹೊರಹಾಕಿದ್ದಾರೆ.

"

ಕಾಂಗ್ರೆಸ್ ನಾಯಕರು ನನ್ನ ಮೇಲೆ ಸವಾರಿ ಮಾಡಿದ್ರೆ ನಾನು ಸುಮ್ಮನೆ ಇರುವುದಿಲ್ಲ.  ನಾನು ಸಚಿವ ಸ್ಥಾನಕ್ಕೆ ಅಂಟಿಕೊಂಡು‌ ಕುಳಿತಿಲ್ಲ. ನಾನು ಹಸ್ತಕ್ಷೇಪ ಮಾಡ್ತೀನಿ ಅಂದ್ರೆ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಪುಟಗೋಸಿ‌ ಮಂತ್ರಿಗಿರಿಗೆ ನಾನು ಹೆದರುವುದಿಲ್ಲ. ಡಿಸಿಎಂ ಪರಮೇಶ್ವರ್ ಅವರು ರೇವಣ್ಣ, ಕುಮಾರಸ್ವಾಮಿ ಜೊತೆ ಸೇರಿಕೊಂಡಿದ್ದಾರೆ. ಅದಕ್ಕೆ ಖಾತೆಗೆ ಕೋಕ್ ಕೊಟ್ಟಿದ್ದಾರೆ ಅಂತ ಕೆಲ ಕಾಂಗ್ರೆಸ್ ನಾಯಕರೆ ಹೇಳುತ್ತಿದ್ದಾರೆ.

ರಾಹುಕಾಲ ಎಫೆಕ್ಟ್ : ಎದ್ನೋ ಬಿದ್ನೋ ಅಂತ ಓಡಿದ ಸಚಿವ ರೇವಣ್ಣ

ಯಾರೇ ಹೇಳಿದ್ರು ನೇರವಾಗಿ ಹೇಳಲಿ. ನಾನು ಯಾರ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹಾಗೇನಾದ್ರು ಇದ್ರೆ ಬಹಿರಂಗವಾಗಿ ಹೇಳಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡಿದ್ರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ರೇವಣ್ಣ ಎಚ್ಚರಿಕೆ ನೀಡಿದರು.

ರೇವಣ್ಣ ಮೆಣಸಿನಕಾಯಿ ಭಜ್ಜಿ ತಿಂದ ಕತೆ

 

 

click me!