ಮನೆ ಮುಂದೆ ಏಲಿಯನ್: ಓಡೋಡಿ ಬಂದ ಪೊಲೀಸರು!

Published : Dec 28, 2018, 05:52 PM IST
ಮನೆ ಮುಂದೆ ಏಲಿಯನ್:  ಓಡೋಡಿ ಬಂದ ಪೊಲೀಸರು!

ಸಾರಾಂಶ

ಭೂಮಿಗೆ ಬಂದಿರುವ ಏಲಿಯನ್ ದಾಳಿಗೆ ಸಜ್ಜಾಗಿವೆ| ಪ್ರಧಾನಿ ಕಚೇರಿಗೆ ಪುಣೆ ವ್ಯಕ್ತಿಯ ಇ-ಮೇಲ್| ವ್ಯಕ್ತಿಯ ಇ-ಮೇಲ್ ಗೆ ಬೆಚ್ಚಿದ ಮಹಾರಾಷ್ಟ್ರ ಸರ್ಕಾರ| ಮನೆ ಮುಂದೆ ಏಲಿಯನ್ ನೋಡಿದ್ದಾಗಿ ವ್ಯಕ್ತಿಯ ನಂಬಿಕೆ| ಕೂಡಲೇ ವ್ಯಕ್ತಿಯ ವ್ಯಕ್ತಿಯ ಮನೆಗೆ ದೌಡಾಯಿಸಿದ ಪೊಲೀಸರು| ವಿಚಾರಣೆ ವೇಳೆ ಮಾನಸಿಕ ಅಸ್ವಸ್ಥ ಎಂಬುದು ದೃಢ

ಪುಣೆ(ಡಿ.28): ಭೂಮಿಗೆ ಅದಾಗಲೇ ಏಲಿಯನ್ ಗಳು ಬಂದಿದ್ದು, ಮಾನವ ಅವುಗಳನ್ನು ಗುರುತಿಸುವಲ್ಲಿ ವಿಫಲನಾಗಿದ್ದಾನೆ ಎಂದು ಇತ್ತೀಚಿಗಷ್ಟೇ ನಾಸಾದ ಮಾಜಿ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ಹೇಳಿದ್ದು ನಿಮಗೆ ನೆನಪಿರಬೇಕಲ್ಲ.

ನಿಮಗೆ ನೆನಪಿದೆಯೋ ಇಲ್ಲವೋ ಆದರೆ ಇದನ್ನು ಬಹುಶಃ ನೆನಪಿಟ್ಟುಕೊಂಡಿದ್ದ ಪುಣೆಯ ವ್ಯಕ್ತಿಯೋರ್ವ ಮಾತ್ರ ತನ್ನ ಮನೆ ಮುಂದೆ ಏಲಿಯನ್ ನೋಡಿದ್ದಾಗಿ ಪಟ್ಟು ಹಿಡಿದಿದ್ದಾನೆ. 

ಹೌದು, ಪುಣೆಯ 47 ವರ್ಷದ ವ್ಯಕ್ತಿಯೋರ್ವ ತನ್ನ ಮನೆಯ ಮುಂದೆ ಏಲಿಯನ್ ಹಾದು ಹೋಗಿದ್ದನ್ನು ತಾನು ನೋಡಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲ ಈ ಕುರಿತು ಪ್ರಧಾನಿ ಕಚೇರಿಗೆ ಇ-ಮೇಲ್ ಮಾಡಿ  ವಿಷಯ ತಿಳಿಸಿದ್ದಾನೆ.

ಇನ್ನು ಪ್ರಧಾನಿ ಕಚೇರಿಗೆ ಇ-ಮೇಲ್ ಹೋಗಿದೆ ಎಂದರೆ ಕೇಳಬೇಕೆ?. ತಕ್ಷಣ ಇ-ಮೇಲ್ ಕುರಿತು ಮಹಾರಾಷ್ಟ್ರ ಗೃಹ ಕಚೇರಿಗೆ ಸುದ್ದಿ ಮುಟ್ಟಿಸಲಾಗಿದೆ.

ಕೂಡಲೇ ಎಚ್ಚೆತ್ತ ಗೃಹ ಇಲಾಖೆ ಪುಣೆ ಪೊಲೀಸರನ್ನು ವ್ಯಕ್ತಿಯ ಮನೆಗೆ ಕಳುಹಿಸಿದೆ. ಏಲಿಯನ್ ನೋಡಿದ್ದಾಗಿ ತಿಳಿಸಿದ್ದ ವ್ಯಕ್ತಿಯ ಮನೆಗೆ ದೌಡಾಯಿಸಿದ ಪೊಲೀಸರು, ಎಲ್ಲಿ ಏಲಿಯನ್?, ಹೇಗಿತ್ತು?, ಎಲ್ಲಿ ಹೋಯ್ತು? ಅಂತೆಲ್ಲಾ ಪ್ರಶ್ನೆ ಕೇಳಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದ್ದೆನೆಂದರೆ ಇ-ಮೇಲ್ ಮಾಡಿದ್ದ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಬ್ರೈನ್ ಹ್ಯಾಮರೇಜ್ ಆಪರೇಶನ್ ಗೆ ಒಳಗಾಗಿದ್ದು, ಇದರಿಂದ ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ಗೊತ್ತಾಗಿದೆ.

ವಿಚಾರಣೆ ವೇಳೆ ಏಲಿಯನ್ ಗಳು ಭೂಮಿಗೆ ದಾಳಿ ಮಾಡಲಿದ್ದು, ಈ ಕುರಿತು ತನ್ನೊಂದಿಗೆ ಮಾಹಿತಿ ಹಂಚಿಕೊಳ್ಳಲು ತನ್ನ ಮನೆಗೆ ಬಂದಿದ್ದಾಗಿ ಆತ ಹೇಳಿದ್ದಾನೆ.

ಇನ್ನು ಸತ್ಯಾಸತ್ಯತೆ ಅರಿತ ಪೊಲೀಸ್ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರ ನಿರಾಳವಾಗಿದ್ದು, ಸದ್ಯಕ್ಕೇನು ಭೂಮಿಗೆ ಆತಂಕವಿಲ್ಲ ಎಂದು ನಿಟ್ಟುಸಿರು ಬಿಟ್ಟಿವೆ.

‘ಏಲಿಯನ್ಸ್ ಭೂಮಿಗೆ ಬಂದಾಗಿದೆ, ಮಾನವ ಜನಾಂಗ ಆಪತ್ತಿನಲ್ಲಿದೆ’!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲಿನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ