ಇಟಾನಗರದ ಈ ಗ್ರಾಮದಲ್ಲಿ ಒಂದು ಮೂಟೆ ಸಿಮೆಂಟ್ ಬೆಲೆ 8000 ರು..!

By Suvarna Web DeskFirst Published Nov 19, 2017, 3:20 PM IST
Highlights

ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 126 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು. ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8000 ರು. ದರ ವಿಧಿಸುತ್ತಿದೆ.

ಇಟಾನಗರ(ನ.19) ಸಿಮೆಂಟ್ ಬೆಲೆ ಹೆಚ್ಚು ಎಂದರೆ ಎಷ್ಟಿದ್ದೀತು. 1000 ಅಥವಾ 2000 ಎಂದು ಕೊಂಡರೆ, ಖಂಡಿತಾ ಅದು ತಪ್ಪು. ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್‌ಗೆ ಬರೋಬ್ಬರಿ 8000 ರು. ಬೆಲೆ ತೆರುತ್ತಿದ್ದಾರೆ.

ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್‌ಗೆ ಇಷ್ಟೊಂದು ದುಬಾರಿ ದರ ವಿಧಿಸಲು ಕಾರಣ,ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 126 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು. ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8000 ರು. ದರ ವಿಧಿಸುತ್ತಿದೆ.

50 ಕೆಜಿ ಭಾರ ಹೊತ್ತು ಕೊರೆಯುವ ಚಳಿಯಲ್ಲಿ ಮತ್ತು ದುರ್ಗಮ ಪ್ರದೇಶದಲ್ಲಿ 156 ಕಿ.ಮೀ ಕ್ರಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಿಮೆಂಟ್ ಮೂಟೆಗೆ ಅಷ್ಟು ದರ ವಿಧಿಸಲಾಗುತ್ತಿದೆ ಎನ್ನಲಾಗಿದೆ.

click me!