ಡೈರಿ ಪ್ರಕರಣ: BSY ಸಹಿ ಸ್ಪಷ್ಟತೆ ಇಲ್ಲ ಎಂದ ಸಿಬಿಡಿಟಿ!

By Web DeskFirst Published Mar 23, 2019, 8:03 PM IST
Highlights

ಬಿಎಸ್ ವೈ ಡೈರಿ ಕೆದಕಿ  ಪೇಚಿಗೆ ಸಿಲುಕಿದ ಕಾಂಗ್ರೆಸ್?| ಪ್ರಕರಣದಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ ಎಂದಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ| ಡೈರಿಯಲ್ಲಿರುವ ಹಸ್ತಾಕ್ಷರ ಯಡಿಯೂರಪ್ಪನವರದ್ದೇ ಎಂಬುದಕ್ಕೆ ಪುರಾವೆಗಳಿಲ್ಲ ಎಂದ ಸಿಬಿಡಿಟಿ| ಈ ಪ್ರಕರಣದ ತನಿಖೆ ನೆನೆಗುದಿಗೆ ಬೀಳುವುದು ಬಹುತೇಕ ಖಚಿತ?|

ನವದೆಹಲಿ(ಮಾ.23): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಡೈರಿ ಕೆದಕಿದ್ದ ಕಾಂಗ್ರೆಸ್ ಗೆ ಈ ನಡೆಯೇ ಮುಳುವಾಗುವ ಸಾಧ್ಯತೆಗಳಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಪ್ರತಿಕ್ರಿಯಿಸಿದ್ದು ಪ್ರಕರಣದಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಡೈರಿಯಲ್ಲಿರುವ ಹಸ್ತಾಕ್ಷರವೂ ಯಡಿಯೂರಪ್ಪನವರದ್ದೇ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿರುವುದು ಕಾಂಗ್ರೆಸ್ ಮುಖಭಂಗ ಅನುಭವಿಸುವಂತಾಗಿದೆ.

ಅಲ್ಲದೇ ಮೂಲ ಪ್ರತಿ ಸಿಗದೇ ಈ ಪ್ರಕರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಐಟಿ ಇಲಾಖೆ ಹೇಳುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆ ನೆನೆಗುದಿಗೆ ಬೀಳುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತಂತೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಸುದ್ದಿಗೋಷ್ಠಿ ಮಾಡಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.

ಜೀವಂತ ಸಮಾಧಿಯಾಗಿರುವ ಈ ಪ್ರಕರಣವನ್ನು ಕೆದಕುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಪ್ರತಿಷ್ಠೆಗೆ ಧಕ್ಕೆ ಮಾಡಿಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡಿದೆ.

click me!
Last Updated Mar 23, 2019, 8:03 PM IST
click me!