ಬುರ್ಜ್ ಖಲೀಫಾ ಮೇಲೆ ನ್ಯೂಜಿಲ್ಯಾಂಡ್ ಪ್ರಧಾನಿ ಫೋಟೋ| ಮಸೀದಿ ದಾಳಿ ಖಂಡಿಸಿದ್ದ ನ್ಯೂಜಿಲ್ಯಾಂಡ್ ಪ್ರಧಾನಿ ಜೆಂಸಿಂದ ಆರ್ಡೆರ್ನ್| ದಾಳಿಯಲ್ಲಿ ಹತರಾದವರ ಕುಟುಂಬಸ್ಥರನ್ನು ಆಲಿಂಗಿಸಿರುವ ಫೋಟೋ| ಸಹೋದರತ್ವದ ಸಂದೇಶ ಸಾರಿದ್ದಕ್ಕೆ ಧನ್ಯೌಆದ ಸಲ್ಲಿಸಿದ ದುಬೈ ದೊರೆ|
ದುಬೈ(ಮಾ.23): ಮಸೀದಿ ಮೇಲಿನ ದಾಳಿ ಖಂಡಿಸಿ ದೇಶದ ಮುಸ್ಲಿಮರ ಪರ ಗಟ್ಟಿಯಾಗಿ ನಿಂತ ನ್ಯೂಜಿಲ್ಯಾಂಡ್ ಪ್ರಧಾನಿ ಜೆಂಸಿಂದ ಆರ್ಡೆರ್ನ್ ಫೋಟೋವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಗಿದೆ.
ದಾಳಿಯಲ್ಲಿ ಹತರಾದವರ ಕುಟುಂಬಸ್ಥರನ್ನು ಆಲಿಂಗಿಸಿರುವ ಜೆಂಸಿಂದ ಆರ್ಡೆರ್ನ್ ಫೋಟೋವನ್ನು ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಗಿದೆ.
undefined
ಇನ್ನು ನ್ಯೂಜಿಲ್ಯಾಂಡ್ ಮಸೀದಿ ದಾಳಿಯನ್ನು ಖಂಡಿಸಿದ್ದಲ್ಲದೇ, ಮುಸ್ಲಿಮರ ಪರ ಮಾತನಾಡಿದ್ದ ನ್ಯೂಜಿಲ್ಯಾಂಡ್ ಪ್ರಧಾನಿ ಜೆಂಸಿಂದ ಆರ್ಡೆರ್ನ್ ನಡೆಯನ್ನು ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಶೀದ್ ಅಲ್-ಮಕ್ತೂಮ್, ಜನಾಂಗೀಯ ದಾಳಿಯ ವೇಳೆ ಸಹೋದರತ್ವ ಮತ್ತು ಸಹಿಷ್ಣುತೆಯ ಸಂದೇಶ ಸಾರಿದ ನ್ಯೂಜಿಲ್ಯಾಂಡ್ ಪ್ರಧಾನಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.