ಸಾಗರಕ್ಕೆ ಹೊಸ ಚೌಕಿದಾರ: ಕರಮ್ ಬೀರ್ ಸಿಂಗ್ ನೌಕಾಪಡೆ ಮುಖ್ಯಸ್ಥ

By Web DeskFirst Published Mar 23, 2019, 5:14 PM IST
Highlights

ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್ ಮುಂದಿನ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕ| 24ನೇ ಚೀಫ್ ಆಫ್ ನೇವಲ್ ಸ್ಟಾಫ್ ಆಗಲಿದ್ದಾರೆ ಸಿಂಗ್

ನವದೆಹಲಿ[ಮಾ.23]: ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್ ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ರಕ್ಷಣಾ ಇಲಾಖೆ ಈ ಮಾಹಿತಿಯನ್ನು ಶನಿವಾರ ಖಚಿತಪಡಿಸಿದೆ.

2019ರ ಮೇ 31ರಂದು ಪ್ರಸ್ತುತ ನೌಕಾ ಸೇನೆಯ ಚೀಫ್ ಅಡ್ಮಿರಲ್ ಆಗಿರುವ ಸುನಿಲ್ ಲಾಂಬಾ ನಿವೃತ್ತಿಯಾಗಲಿದ್ದಾರೆ. ಲಾಂಬಾ ನಿವೃತ್ತಿಯಂದು ಸಿಂಗ್ ನೂತನ ಚೀಫ್ ಆಫ್ ನೇವಲ್ ಸ್ಟಾಫ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

Ministry of Defence issues correction, "Government appoints Vice Admiral Karambir Singh as the next Chief of Naval Staff. Chief of Naval Staff Admiral Sunil Lanba will vacate the office on 31 May 2019." pic.twitter.com/eEYPtQfNGZ

— ANI (@ANI)

ಸದ್ಯ ವೈಸ್ ಅಡ್ಮಿರಲ್ ಆಗಿರುವ ಕರಮ್ ಬೀರ್ ಸಿಂಗ್ ವಿಶಾಖಪಟ್ಟಣಂನಲ್ಲಿ ಪೂರ್ವ ನೌಕಾಪಡೆಯ ಫ್ಲಾಗ್ ಆಫೀಸರ್ ಇನ್ ಕಮಾಂಡಿಂಗ್ ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಮೇ ತಿಂಗಳಲ್ಲಿ ನೌಕಾಪಡೆಯ ಜವಾಬ್ದಾರಿ ವಹಿಸಿಕೊಳ್ಳಲಿರುವ ಕರಮ್ ಬೀರ್ ಸಿಂಗ್ ಭಾರತೀಯ ನೌಕಪಡೆಯ 24ನೇ ಚೀಫ್ ಆಫ್ ನೇವಲ್ ಸ್ಟಾಫ್ ಆಗಲಿದ್ದಾರೆ.

click me!