ಮೆಟ್ಟೂರು ಜಲಾಶಯದಲ್ಲಿ ಪರಿಶೀಲನೆ : ಅ.17 ಸುಪ್ರೀಂ'ಗೆ ವರದಿ

By Web DeskFirst Published Oct 9, 2016, 3:33 PM IST
Highlights

ಮೆಟ್ಟೂರುಜಲಾಶಯದಲ್ಲಿಸಂಗ್ರಹವಾಗಿರುವನೀರು, ಒಳಹರಿವು, ಹೊರಹರಿವನ್ನುಪರಿಶೀಲನೆನಡೆಸಿದೆ. ಅಲ್ಲದೆಜಲಾನಯನಭಾಗದಲ್ಲಿಬೆಳೆದಿರುವಬೆಳೆಯಪರಿಸ್ಥಿತಿಯನ್ನುವೀಕ್ಷಣೆಮಾಡಿದರು.

ಮೆಟ್ಟೂರು (ಅ.9): ಕರ್ನಾಟಕದಲ್ಲಿ ಕಾವೇರಿ ಕೊಳ್ಳದ ಅಧ್ಯಯನ ಮುಗಿಸಿರುವ ಕೇಂದ್ರ ಜಲ ಆಯೋಗ ತಮಿಳುನಾಡಿಗೆ ಭೇಟಿ ನೀಡಿದೆ. ಅಧ್ಯಕ್ಷ  ಜಿ.ಎಸ್ ಝಾ ನೇತೃತ್ವದ ಕೇಂದ್ರ ಸರ್ಕಾರದ ತಜ್ಞರ ತಂಡ ತಮಿಳುನಾಡಿನ ಮೆಟ್ಟೂರು ಜಲಾಶಯದ ಅಚ್ಚು ಕಟ್ಟು ಪ್ರದೇಶದಲ್ಲಿ ಪರಿಶೀಲನೆ ನಡೆಸಿತು. ಮೆಟ್ಟೂರು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು, ಒಳ ಹರಿವು, ಹೊರ ಹರಿವನ್ನು ಪರಿಶೀಲನೆ ನಡೆಸಿದೆ. ಅಲ್ಲದೆ ಜಲಾನಯನ ಭಾಗದಲ್ಲಿ ಬೆಳೆದಿರುವ ಬೆಳೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ರು.  ಎರಡು ದಿನ ತಮಿಳುನಾಡಿನಲ್ಲಿ ಅಧ್ಯಯನ ನಡೆಸಿ ಬಳಿಕ ಚೆನ್ನೈನಲ್ಲಿ ಸಭೆ ನಡೆಸಲಿದೆ. ವರದಿ ತಯಾರಿಸಿ ಅಕ್ಬೋಬರ್ 17ರಂದು ಸುಪ್ರೀಂಕೋರ್ಟ್ ಕೇಂದ್ರ ಅದ್ಯಯನ ತಂಡ ವರದಿ ಸಲ್ಲಿಸಲಿದೆ.

click me!