ಕಾವೇರಿಯ ಕಷ್ಟ ನೋಡಲು ಇಂದು ಆಗಮಿಸಲಿರುವ ಕೇಂದ್ರ ತಂಡ

Published : Oct 06, 2016, 02:39 AM ISTUpdated : Apr 11, 2018, 01:07 PM IST
ಕಾವೇರಿಯ ಕಷ್ಟ ನೋಡಲು ಇಂದು ಆಗಮಿಸಲಿರುವ ಕೇಂದ್ರ ತಂಡ

ಸಾರಾಂಶ

ಬೆಂಗಳೂರು(ಅ.06): ಕಾವೇರಿ ಕೊಳ್ಳದ ವಸ್ತು ಸ್ಥಿತಿ ಅಧ್ಯಯನ ನಡೆಸಲು ಇಂದು ರಾಜ್ಯಕ್ಕೆ ತಜ್ಞರ ಸಮಿತಿ ಆಗಮಿಸಲಿದೆ. ಈ ತಂಡ 10 ದಿನಗಳ ಕಾವೇರಿಕೊಳ್ಳದಲ್ಲಿ ಅಧ್ಯಯನ ನಡೆಸಲಿದೆ. ಸರ್ಕಾರ ಕೂಡಾ ಈ ತಜ್ಞರ ತಂಡಕ್ಕೆ  ಪೂರಕ ಮಾಹಿತಿ ನೀಡುವಂತೆ ಕೆಲ ಅಧಿಕಾರಿಳಿಗೆ ಸೂಚಿಸಿದ್ದಾರೆ.

ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿದ್ದ ಸುಪ್ರೀಂಕೋರ್ಟ್, ಕಾವೇರಿ ಕೊಳ್ಳದ ವಸ್ತುಸ್ಥಿತಿ ಅರಿಯಲು ಉಭಯ ರಾಜ್ಯಗಳಿಗೂ ತೆರಳಿ ಅಧ್ಯಯನ ನಡೆಯುವಂತೆ ಆದೇಶಿಸಿತ್ತು. ಈ ಆದೇಶ ಹಿನ್ನೆಲೆ ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಲಿದೆ. ಈ ಜಲತಜ್ಞರ ತಂಡದಲ್ಲಿ ಯಾರೆಲ್ಲ ಇರುತ್ತಾರೆ? ಇಲ್ಲಿದೆ ವಿವರ:

 

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ

CWC ಸದಸ್ಯ ಎಸ್. ಮಸೂದ್

ಕೃಷ್ಣ ಗೋದಾವರಿ ಕೊಳ್ಳದ ಮುಖ್ಯ ಎಂಜನೀಯರ್ ಆರ್.ಕೆ.ಗುಪ್ತಾ

ಕರ್ನಾಟಕ ಹಾಗೂ ತಮಿಳುನಾಡಿ ಮುಖ್ಯ ಕಾರ್ಯದರ್ಶಿಗಳು, ಇಲ್ಲವೇ ಅವರು ಸೂಚಿಸುವ ಪ್ರತಿನಿಧಿಗಳು

ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪುದುಚೇರಿಯ ಮುಖ್ಯ ಎಂಜನಿಯರ್

ಈ ತಂಡ ಅಕ್ಟೋಬರ್ 7ರಿಂದ 17ರವರೆಗೆ ಉಭಯ ರಾಜ್ಯಗಳ ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿ ಅಲ್ಲಿ ಅಧ್ಯಯನ ನಡೆಸಲಿದೆ. ಬಳಿಕ ಅಕ್ಟೋಬರ್ 17ಕ್ಕೆ ಸುಪ್ರೀಂ ಕೋರ್ಟ್ ಗೆ ಸಮಿತಿ ತನ್ನ ವರದಿ ಸಲ್ಲಿಸಲಿದೆ.

ಸಮಿತಿ ಆಗಮಿಸುತ್ತಿರುವ ಹಿನ್ನೆಲೆ ನಿನ್ನೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಾಯಿತು. ಈ ವೇಳೆ ಸಮಿತಿ ಪೂರಕ ಮಾಹಿತಿ ಒದಗಿಸುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಲ್ಲದೆ ಹಿರಿಯ ಸಚಿವರಿಗೆ ಅಗತ್ಯ ಮಾಹಿತಿ ಒದಗಿಸಿಕೊಡಲು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.

ಒಟ್ಟಾರೆ ಈ ತಂಡಕ್ಕೆ ನಮ್ಮ ನಾಯಕರು ಕಾವೇರಿ ಕಷ್ಟವನ್ನು ಮನವರಿಕೆ ಮಾಡಿಕೊಡುತ್ತಾರೆ, ಸಮಿತಿಯು ಅಧ್ಯಯನ ನಡೆಸಿ ಸುಪ್ರೀಂಗೆ ಯಾವ ರೀತಿ ವರದಿ ಸಲ್ಲಿಸುತ್ತದೆ ಎಂಬುದನ್ನು ತಿಳಿಯಬೇಕಾದರೆ ಅಕ್ಟೋಬರ್ 18ರವರೆಗೆ ಕಾಯಲೇಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!