ಜಾತಿ ಜನಗಣತಿ ವರದಿ ಬಿಡುಗಡೆಗೆ ಬ್ರೇಕ್?: ಹೈಕಮಾಂಡ್'ನಿಂದ ಸಿದ್ದರಾಮಯ್ಯಗೆ ಕಟ್ಟಪ್ಪಣೆ

Published : Jul 16, 2017, 09:04 AM ISTUpdated : Apr 11, 2018, 01:13 PM IST
ಜಾತಿ ಜನಗಣತಿ ವರದಿ ಬಿಡುಗಡೆಗೆ ಬ್ರೇಕ್?: ಹೈಕಮಾಂಡ್'ನಿಂದ ಸಿದ್ದರಾಮಯ್ಯಗೆ ಕಟ್ಟಪ್ಪಣೆ

ಸಾರಾಂಶ

ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿ ಗಣತಿಯಾಗಿತ್ತು. ಕೋಟ್ಯಂತರ ರೂ.ವೆಚ್ಚದಲ್ಲಿ ಸಿದ್ಧಪಡಿಸಿದ ಜಾತಿಗಣತಿ ವರದಿ ಧೂಳು ಹಿಡಿಯೋ ಸಾಧ್ಯತೆ ಹೆಚ್ಚಿದೆ. ವರದಿ ಬಿಡುಗಡೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.

ಬೆಂಗಳೂರು(ಜು.16): ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿ ಗಣತಿಯಾಗಿತ್ತು. ಕೋಟ್ಯಂತರ ರೂ.ವೆಚ್ಚದಲ್ಲಿ ಸಿದ್ಧಪಡಿಸಿದ ಜಾತಿಗಣತಿ ವರದಿ ಧೂಳು ಹಿಡಿಯೋ ಸಾಧ್ಯತೆ ಹೆಚ್ಚಿದೆ. ವರದಿ ಬಿಡುಗಡೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.

ಕಾಂಗ್ರೆಸ್​ಗೆ ಅಹಿಂದ ಮತ ವಿಭಜನೆ ಆತಂಕ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ತಂತ್ರಗಳಲ್ಲಿ ಜಾತಿ ಗಣತಿ ಕೂಡಾ ಒಂದಾಗಿತ್ತು.  ಕೇವಲ ಜಾತಿ ಗಣತಿ ಮಾಡಿದ್ರೆ ಕೋರ್ಟ್ ಮಧ್ಯಪ್ರವೇಶ ಮಾಡಬಹುದು ಅನ್ನೋ ಕಾರಣಕ್ಕೆ ಜನತೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ನೆಪದಲ್ಲಿ ಜಾತಿ ಗಣತಿ ಮಾಡುವ ಲೆಕ್ಕಾಚಾರವನ್ನ ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ವಿರೋಧದ ನಡುವೆಯೂ ಸಮಾಜ ಕಲ್ಯಾಣ ಇಲಾಖೆ  ಜಾತಿ ಗಣತಿ ನಡೆಸಿದ್ದು, ಡಿಸೆಂಬರ್‌'ನಲ್ಲಿ ವರದಿ ಬಿಡುಗಡೆಗೆ ನಿರ್ಧರಿಸಿತ್ತು. ಆದ್ರೆ ಇದೀಗ ದಿಢೀರ್ ಮಧ್ಯಪ್ರವೇಶಿಸಿದ ಹೈಕಮಾಂಡ್, ಚುನಾವಣೆವರೆಗೂ ವರದಿ ಬಿಡುಗಡೆ ಮಾಡದಂತೆ ಸಿಎಂಗೆ ಕಟ್ಟಪ್ಪಣೆ ಮಾಡಿದೆ.  

ಕಾಂಗ್ರೆಸ್‌ಗೆ ‘ಜಾತಿ’ ಭಯವೇಕೆ..?

ಚುನಾವಣೆಗೂ ಮುನ್ನ ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಕಾಂಗ್ರೆಸ್  ಬದಲಾಗಿ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ.  ಸಧ್ಯದ ಗಣತಿ ಪ್ರಕಾರ ಮುಸಲ್ಮಾನರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ಮನವೊಲಿಸಲು ಯತ್ನಿಸಿದ್ದು,  ಹಿಂದುಗಳನ್ನು ನಿರ್ಲಕ್ಷ್ಯ ಮಾಡ್ತಿದೆ  ಅನ್ನೋ ಭಾವನೆಯನ್ನು ಹಿಂದುಳಿದ ವರ್ಗದ ಜನತೆಯಲ್ಲಿ ಬಿಜೆಪಿ ಮೂಡಿಸೋ ಸಾಧ್ಯತೆಯಿದೆ. ಹೀಗಾಗಿ ಚುನಾವಣೆಯಲ್ಲಿ ಅಹಿಂದ ಮತಗಳು ವಿಭಜನೆಯಾಗಲಿದೆ  ಅಂತಾ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಹೀಗಾಗಿ  ಕಾಂಗ್ರೆಸ್ ಹೈಕಮಾಂಡ್ ಚುನಾವಣೆವರೆಗೂ ಜಾತಿ ಗಣತಿ ವರದಿ ಬಿಡುಗಡೆ ಮಾಡದಂತೆ ಸಿದ್ದರಾಮಯ್ಯಗೆ ಸೂಚನೆ ನೀಡಿದೆ. ಸಿಎಂ ಕೂಡ ಜಾತಿ ಗಣತಿ ವರದಿ ಬಗ್ಗೆ ತುಟಿ ಬಿಚ್ಚದಂತೆ  ಸಚಿವ ಆಂಜನೇಯ ಅವ್ರಿಗೆ ತಾಕೀತು ಮಾಡಿದ್ದಾರೆ. ಅಲ್ದೇ  ಒಬಿಸಿ ಆಯೋಗದ ಅಧ್ಯಕ್ಷ ಕಾಂತರಾಜು ಅವಧಿಯನ್ನು ಅನಿರ್ದಿಷ್ಟವಾಗಿ ಮುಂದೂಡಿದೆ. ಹೀಗಾಗಿ ಜಾತಿ ಗಣತಿ ವರದಿ ಧೂಳು ಹಿಡಿಯೋ ಸಾಧ್ಯತೆ ಹೆಚ್ಚಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಹೊಸ 600 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭ: ಗೃಹ ಸಚಿವ ಪರಮೇಶ್ವರ್‌
ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ