
ಬೆಂಗಳೂರು(ಜು.16): ಪರಪ್ಪನ ಅಗ್ರಹಾರದಲ್ಲಿನ ಅನಾಚಾರಗಳು ಬಯಲಾಗ್ತಿದ್ದಾಗೆ, ಸೆಂಟ್ರಲ್ ಜೈಲಿನಲ್ಲಿ ಆಕ್ರೋಶದ ಬೆಂಕಿ ಹೊತ್ತಿ ಉರಿದಿದೆ. ಒಂದೆಡೆ ಅಧಿಕಾರಿಗಳ ಪ್ರತಿಷ್ಠೆಯ ಕಚ್ಚಾಟ ಮುಂದುವರೆದಿದ್ರೆ, ಇನ್ನೊಂದೆಡೆ ಕೈದಿಗಳ ನಡುವೆ ಬ್ರಿಟಿಷರ ಒಡೆದು ಆಳುವ ನೀತಿ ಪ್ರಯೋಗವಾಗಿದೆ. ಒಂದೇ ಸೂರಿನ ಕೆಳಗೆ ಪರ-ವಿರೋಧದ ಅಲೆಗಳೆದ್ದಿವೆ.
ಅಗ್ರಹಾರದ ಅವಾಂತರ
ಪರಪ್ಪನ ಅಗ್ರಹಾರದ ಅನಾಚಾರಗಳನ್ನ ಡಿಐಜಿ ರೂಪ ಹೊರಹಾಕಿದ್ದೇ ತಡ, ಅಗ್ರಹಾರ ಅಕ್ಷರಶಃ ಯುದ್ಧ ಭೂಮಿಯಂತಾಗಿದೆ. ಡಿಐಜಿ ರೂಪ ಕೈದಿಗಳನ್ನು ಒಂದೇ ರೀತಿಯಾಗಿ ನೋಡಿಕೊಳ್ಳಿ ಅಂತಾ ಸೂಚಿಸಿದರೆ, ಇಲ್ಲ ಕೈದಿಗಳನ್ನು ನಿಯಂತ್ರಿಸಲು ಡಿವೈಡ್ ಅಂಡ್ ರೂಲ್ ಮಾಡಲೇಬೇಕು ಅಂತಾರಂತೆ ಜೈಲು ಅಧೀಕ್ಷಕ ಕೃಷ್ಣಕುಮಾರ್. ಅದರಂತೇ ಈಗಾಗಲೇ ಕೈದಿಗಳು ಇಬ್ಭಾಗವಾಗಿದ್ದು, ರೂಪ ಪರ ಮತ್ತು ವಿರೋಧ ಘೋಷಣೆ ಕೂಗಿ ನಿನ್ನೆ ಜೈಲಿನಲ್ಲೇ ಪ್ರತಿಭಟಿಸಿದರು.
ವಾಯ್ಸ್ 2 : ರೂಪಾ ಭೇಟಿಯಿಂದ ಅಗ್ರಹಾರದಲ್ಲಿ ಉಧ್ವಿಗ್ನ ವಾತಾವರಣ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಡಿಸಿಪಿ.ಬೋರಲಿಂಗಯ್ಯನವರೇ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ರೂಪಾ ವಿರುದ್ಧ ಮಹಿಳಾ ಕೈದಿಗಳು ಊಟ ತ್ಯಜಿಸಿ ತಿರುಗಿ ಬಿದ್ದಿದ್ದು, ಕೈದಿಗಳ ಪ್ರತಿಭಟನೆ ನಿಯಂತ್ರಿಸಲು ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಬಂಡೆಪಾಳ್ಯ ಪೊಲೀಸ್ ಠಾಣೆ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಯಿತು.
ನಂತರ ಡಿಸಿಪಿ.ಬೋರಲಿಂಗಯ್ಯ ನೇತೃತ್ವದಲ್ಲಿ ಕೈದಿಗಳ ಮನವೊಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕೈದಿಗಳ ಮನವೊಲಿಸಿ ಅವರ ಬ್ಯಾರಾಕ್ ಗಳಿಗೆ ಮತ್ತೆ ಕಳಿಸಲಾಗಿದೆ. ಇದೀಗ ಜೈಲು ಸಹಜ ಸ್ಥಿತಿಯಲ್ಲಿದೆ. ಕಾರಾಗೃಹ ಅಧಿಕಾರಿಗಳು ನಮ್ಮ ಸಹಾಯ ಕೇಳಿದ್ದರಿಂದ ಭದ್ರತೆ ನೀಡಿದ್ದೇವೆಂದು ಡಿಸಿಪಿ.ಬೋರಲಿಂಗಯ್ಯ ತಿಳಿಸಿದರು.
ಮಾಧ್ಯಮಗಳಲ್ಲಿ ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಬಯಲಾಗ್ತಿದ್ದಾಗೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕುಗಳ ಸಮಿತಿ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಿದೆ. ಒಟ್ಟಿನಲ್ಲಿ ಮೇಲಧಿಕಾರಿಗಳ ಒಳಜಗಳದಿಂದ ಹೊರಬಂದ ಅನಾಚಾರಕ್ಕೆ ಇನ್ನಾದರೂ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.