
ಹುಬ್ಬಳ್ಳಿ(ಜು.16): ನೇಗಿಲ ಹಿಡಿಯಬೇಕಾದವನು ಕೈಯಲ್ಲಿ ಕಲ್ಲು ಹಿಡಿದಿದ್ದಾನೆ. ಬೆಳೆ ಬೆಳೆಯಬೇಕಾದವರು ವಾಹನ ಮತ್ತು ಟೈರುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳಸಾ ಬಂಡೂರಿ ನೀರಿಗಾಗಿ ಅನ್ನದಾತ ಬೀದಿಗಿಳಿದು ಹೋರಾಟಕ್ಕೆ ಧುಮುಕಿ ಇಂದಿಗೆ 2 ವರ್ಷ. ಇವತ್ತಿಗೂ ಹುಬ್ಬಳ್ಳಿ-ಧಾರವಾಡ, ನವಲಗುಂದ ನರಗುಂದ ಭಾಗದ ಜನರು ಮಹದಾಯಿ ನೀರಿನ ಹೋರಾಟದಲ್ಲಿ ತೊಡಗಿದ್ದಾರೆ.ರಾಷ್ಟ್ರೀಯ ಹೆದ್ದಾರಿ ತಡೆದ ನೂರಾರು ರೈತರು ಕಳಸಾ ಬಂಡೂರಿ ಜಾರಿಗೆ ಆಗ್ರಹಿಸಿದರು.
4 ದಶಕದ ಬೇಡಿಕೆ ಈಡೇರಿಸುವಂತೆ ರೈತರು ಎಷ್ಟೇ ಪ್ರತಿಭಟಿಸಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾತ್ರ ಕ್ಯಾರೆ ಅಂತಿಲ್ಲ. ಮಹಾದಾಯಿ ನದಿನೀರು ಮಲಪ್ರಭೆಗೆ ಹರಿಸಿ, ಗೋವಾ ಸರ್ಕಾರ ಮೇಲೆ ಒತ್ತಡ ತಂದು ವಿವಾದ ಬಗೆಹರಿಸುವಂತೆ ರೈತರು ಪ್ರತಿಭಡನೆ ನಡೆಸಿದರು. ಕಳಸಾ ಬಂಡೂರಿ ಜಾರಿ ಜೊತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವಂತೆ ರೈತರು ಒತ್ತಾಯಿಸಿದರು.
ಇನ್ನು ಆಳುವ ಸರ್ಕಾರಗಳು ಅನ್ನದಾತ ನ ಕೂಗಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ .ಇಲ್ಲವಾದರೆ ರೈತರ ತಾಳ್ಮೆ ಕಳೆದುಕೊಂಡು ಮತ್ತೊಂದು ನರಗುಂದ ಬಂಡಾಯಕ್ಕೆ ಮುನ್ನುಡಿ ಬರೆದರೂ ಬರೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.