ಜಾತಿ ಗಣತಿ ವರದಿ ಸಿದ್ಧ: ಯಾವ್ಯಾವ ಜಾತಿಯರ ಸಂಖ್ಯೆ ಎಷ್ಟು?

Published : May 13, 2017, 09:30 AM ISTUpdated : Apr 11, 2018, 12:37 PM IST
ಜಾತಿ ಗಣತಿ ವರದಿ ಸಿದ್ಧ: ಯಾವ್ಯಾವ ಜಾತಿಯರ ಸಂಖ್ಯೆ ಎಷ್ಟು?

ಸಾರಾಂಶ

ಒಟ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ, ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು 816  ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ.  ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ.

ಬೆಂಗಳೂರು(ಮೇ 13): ರಾಜ್ಯದಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ತಲೆಕೆಳಗು ಮಾಡುವಂಥ ಜಾತಿ ಗಣತಿ ವರದಿ ಸಿದ್ಧವಾಗಿ ಕೂತಿದೆ. ವರದಿ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಮತ್ತು ಜಾತಿ ಮರುವಿಂಗಡಣೆ ವರದಿ ಸಿದ್ಧವಾಗಿದ್ದು. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಒಟ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ, ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು 816  ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ.  ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ.

ಒಟ್ಟು 5.98 ಕೋಟಿ ಜನ  ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ  32 ಲಕ್ಷ  ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ  ಎಂದು ವರದಿ ಸಿದ್ಧವಾಗಿದೆ.

ವರದಿ ಹೈಲೈಟ್ಸ್:
* ಒಟ್ಟು 5.98 ಕೋಟಿ ಮಂದಿಯ ಸಮೀಕ್ಷೆ
* ಸಮೀಕ್ಷೆಯಿಂದ ಹೊರಗುಳಿದವರ ಪ್ರಮಾಣ 32 ಲಕ್ಷ
* ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ
* ಕರ್ನಾಟಕದಲ್ಲಿ ದಲಿತರ ಪ್ರಮಾಣವೇ ಹೆಚ್ಚು
* ಕುರುಬರೇ ಅತ್ಯಂತ ಹಿಂದುಳಿದ ವರ್ಗ
* ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351
* ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192
* ಸರಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು(ಓಬಿಸಿ) 816
* 10ಕ್ಕಿಂತ ಕಡಿಮೆ ಜನಸಂಖ್ಯೆ ದಾಖಲಾಗಿರುವ ಜಾತಿಗಳ ಪ್ರಮಾಣ 80

ಜಾತಿವಾರು ಜನಸಂಖ್ಯೆ
* ಪರಿಶಿಷ್ಟ ಜಾತಿ(ಎಸ್'ಸಿ)ಯವರ ಸಂಖ್ಯೆ 1.08 ಕೋಟಿ
* ಪರಿಶಿಷ್ಟ ಪಂಗಡ(ಎಸ್'ಟಿ)ದವರ ಪ್ರಮಾಣ 40.45 ಲಕ್ಷ
* ಮುಸ್ಲಿಮರು 70 ಲಕ್ಷ
* ಲಿಂಗಾಯತ: 65 ಲಕ್ಷ
* ಒಕ್ಕಲಿಗ: 60 ಲಕ್ಷ
* ಕುರುಬರು 45 ಲಕ್ಷ
* ಈಡಿಗ: 15 ಲಕ್ಷ
* ವಿಶ್ವಕರ್ಮ: 15
* ಬೆಸ್ತ: 15 ಲಕ್ಷ
* ಬ್ರಾಹ್ಮಣ: 14 ಲಕ್ಷ
* ಗೊಲ್ಲ(ಯಾದವ) 10 ಲಕ್ಷ
* ಮಡಿವಾಳ ಸಮಾಜ: 6
* ಅರೆ ಅಲೆಮಾರಿ 6 ಲಕ್ಷ
* ಕುಂಬಾರ 5 ಲಕ್ಷ
* ಸವಿತಾ ಸಮಾಜ 5 ಲಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ