
ಬೆಂಗಳೂರು(ಮೇ.13): ಮಾತುಗಾರಿಕೆಯಿಂದಲೇ ಹೆಸರು ಮಾಡಿರುವ ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ ಲಂಡನ್'ಗೆ ಹೋಗುತ್ತಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ ? ವಿಶೇಷವಿದೆ. ತೇಜಸ್ವಿ ಸೂರ್ಯ ತಾನಾಗಿಯೇ ಲಂಡನ್ ಹೋಗುತ್ತಿರುವುದಲ್ಲ. ಬ್ರಿಟಿಷ್ ಹೈ ಕಮೀಷನ್ ಅವರನ್ನು ಕರೆಸಿಕೊಳ್ಳುತ್ತಿದೆ. ಯಾಕೆ, ಏನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ತೇಜಸ್ವಿ ಸೂರ್ಯ ವೃತ್ತಿಯಲ್ಲಿ ವಕೀಲ, ಉತ್ತಮ ವಾಗ್ಮಿ. ಬಹುತೇಕ ಟಿವಿ ಚಾನಲ್'ಗಳಲ್ಲಿ ವಾರಕ್ಕೊಮ್ಮೆಯಾದರೂ ಕಾಣಿಸಿಗುವ ಇವರು ಇಂದು ಲಂಡನ್‌ಗೆ ತೆರಳಿದ್ದಾರೆ. ಇವರನ್ನು ಬ್ರಿಟಿಷ್ ಹೈ ಕಮಿಷನ್ ಲಂಡನ್'ಗೆ ಕರೆಸಿಕೊಳ್ಳುತ್ತಿದೆ. ಲಂಡನ್ ಲ್ಲಿ ಇದೇ ತಿಂಗಳ 15 ರಿಂದ 26 ರ ವರೆಗೆ ಬ್ರಿಟಿಷ್ ಹೈ ಕಮೀಷನ್ ವಿವಿಧ ರಾಷ್ಟ್ರಗಳ ಯುವ ರಾಜಕಾರಣಿಗಳ ಸೆಮಿನಾರ್ ಏರ್ಪಡಿಸಿದೆ. ಈ ಸೆಮಿನಾರ್'ಗೆ ಪ್ರತಿ ರಾಜ್ಯಗಳಿಂದ ಒಬ್ಬೊಬ್ಬ ಯುವ ರಾಜಕಾರಣಿಗಳನ್ನ ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ತೇಜಸ್ವಿ ಸೂರ್ಯ ಆಯ್ಕೆ ಆಗಿದ್ದಾರೆ.
ವಿಶೇಷ ಅಂದ್ರೆ ಭಾರತದಿಂದ ಆಯ್ಕೆಯಾದವರಲ್ಲಿ ಎಲ್ಲರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಆದರೆ ತೇಜಸ್ವಿ ಸೂರ್ಯ ಮತ್ತು ಮತ್ತು ಕಾಶ್ಮೀರದ ಬಿಜೆಪಿಯ ಮಹಿಳಾ ಮುಖಂಡೆ, ಹೀನಾ ಭಟ್ ಮಾತ್ರ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಇನ್ನೂ ಪ್ರವಾಸದ ವೇಳೆ ಸ್ಕಾಟ್ಲೆಂಡ್ ಪಾರ್ಲಿಮೆಂಟ್ ಗೆ ಭೇಟಿ ನೀಡಿ ಅಲ್ಲಿನ ಸಂಸದರು , ಮೇಯರ್ ಜೊತೆ ಚರ್ಚೆ ನಡೆಸಲಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ, ತೇಜಸ್ವಿ ಸೂರ್ಯಗೆ , ತನ್ನ ರಾಜ್ಯದ ರಾಜಕೀಯ ವಿಚಾರ ಚರ್ಚಿಸಲು ಅವಕಾಶ ಸಿಕ್ಕಿರೋದು ಖುಷಿಯ ವಿಚಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.