ಫ್ಲಾಟ್ ನಿಂದ ಹಕ್ಕಿಗಳಿಗೆ ಆಹಾರ, ನೀರು ತಪ್ಪು: ಸುಪ್ರೀಂಕೋರ್ಟ್‌

By Web DeskFirst Published Mar 19, 2019, 11:03 AM IST
Highlights

ಫ್ಲಾಟ್ ನಿಂದ ಹಕ್ಕಿಗಳಿಗೆ ಆಹಾರ, ನೀರು ತಪ್ಪು: ಸುಪ್ರೀಂಕೋರ್ಟ್‌| ಇತರೆ ವಾಸಿಗಳಿಗೆ ತೊಂದರೆ ನೀಡುವಂತಿಲ್ಲ

ನವದೆಹಲಿ[ಮಾ.19]: ವಸತಿ ಸಮುಚ್ಛಯ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವವರು ತಮ್ಮ ಮನೆಯ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಇತರೆ ವಾಸಿಗಳಿಗೆ ತೊಂದರೆ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

ಹಕ್ಕಿಗಳಿಗೆ ಆಹಾರ ನೀಡಲು ಅವಕಾಶ ಕೋರಿ ಮುಂಬೈನ ವರ್ಲಿಯಲ್ಲಿರುವ ಬಹುಮಹಡಿ ಕಟ್ಟಡದ ಮಹಿಳಾ ನಿವಾಸಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ವೇಳೆ ಕೋರ್ಟ್‌ ಈ ಸೂಚನೆ ನೀಡಿದೆ. ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಅಲ್ಲಿಯ ನಿಯಮ ಪಾಲಿಸಬೇಕು.

ನೀರಿಲ್ಲದೇ ಜೀವ ಬಿಡುತ್ತಿವೆ ಪಕ್ಷಿಗಳು!

ಆಹಾರ ನೀಡಬೇಕಿದ್ದರೆ ನೀವು ಸಾರ್ವಜನಿಕ ಪ್ರದೇಶ ಆಯ್ಕೆ ಮಾಡಿಕೊಳ್ಳಿ ಎಂದು ಕೋರ್ಟ್‌ ಸೂಚಿಸಿದೆ.

click me!