ಉಗ್ರರನ್ನು ಬೆಂಬಲಿಸಿದ ಪಾಕ್, ಚೀನಾಗೆ ಪಾಕಿಸ್ತಾನ ಪತ್ರಿಕೆ ಛೀಮಾರಿ!

Published : Mar 19, 2019, 09:25 AM ISTUpdated : Mar 19, 2019, 09:49 AM IST
ಉಗ್ರರನ್ನು ಬೆಂಬಲಿಸಿದ ಪಾಕ್, ಚೀನಾಗೆ ಪಾಕಿಸ್ತಾನ ಪತ್ರಿಕೆ ಛೀಮಾರಿ!

ಸಾರಾಂಶ

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಿ| ಪಾಕಿಸ್ತಾನ ಮತ್ತು ಚೀನಾಗೆ ಪಾಕಿಸ್ತಾನ ಪತ್ರಿಕೆ 'ಡಾನ್' ಛೀಮಾರಿ!

ಲಾಹೋರ್‌[ಮಾ.19]: ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಿ ಮಾಡಿದ ಪಾಕಿಸ್ಥಾನ ಮತ್ತು ಚೀನಾಕ್ಕೆ, ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್‌’ ಛೀಮಾರಿ ಹಾಕಿದೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಪಾಕ್‌ ಮತ್ತು ಚೀನಾ ಯಾವುದೇ ಅಡಚಣೆ ಮಾಡದೇ ಸೂಕ್ತ ಸಹಕಾರ ನೀಡಬೇಕು. ಉಗ್ರರಲ್ಲಿ ‘ಒಳ್ಳೆಯ ಮತ್ತು ಕೆಟ್ಟ’ ಎಂಬುದಿಲ್ಲ, ದೇಶಕ್ಕೆ ತೊಂದರೆ ಅಥವಾ ಅಪಾಯ ಉಂಟು ಮಾಡಿದಾಗ ಕ್ರಮ ಕೈಗೊಳ್ಳಲೇ ಬೇಕೆಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಇನ್ನು ಪ್ರಧಾನಿ ಇಮ್ರಾನ್‌ಖಾನ್‌ ಮಾತು ಕೊಟ್ಟಂತೆ, ಉಗ್ರರ ಮಟ್ಟಹಾಕಲು ತುರ್ತಾಗಿ ಮುಂದಾಗಿ ಕ್ರಮ ಕೈಗೊಂಡಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಗೌರವ ಲಭಿಸುತ್ತದೆ ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!