
ನವದೆಹಲಿ: ಪೊಲೀಸ್ ಠಾಣೆಗೆ ಹೋಗಿ, ದೂರು ದಾಖಲಿಸಲು ಹೆದರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ‘ಪ್ರಥಮ ಮಾಹಿತಿ ವರದಿ’(ಎಫ್ ಐಆರ್) ಅಥವಾ ಇ-ಎಫ್‌ಐಆರ್ ಸಲ್ಲಿಸಲು ಅವಕಾಶ ಕಲ್ಪಿಸಬಹುದೇ ಎಂದು ಕೇಂದ್ರ ಗೃಹ ಇಲಾಖೆ, ಕಾನೂನು ಆಯೋಗವನ್ನು ಪ್ರಶ್ನಿಸಿದೆ.
ಈ ಬಗ್ಗೆ ಪರಿಶೀಲನೆ ಮಾಡಿದ ಕಾನೂನು ಆಯೋಗ, ‘ಆನ್‌ಲೈನ್ ಮೂಲಕ ಪ್ರಕರಣಗಳನ್ನು ದಾಖಲಿಸಲು ಅನುಮತಿಸುವ ರೀತಿ ಸಿಆರ್‌ಪಿಸಿ ಕಾನೂನನ್ನು ತಿದ್ದುಪಡಿ ಮಾಡಿದಲ್ಲಿ, ಕೆಲವು ವ್ಯಕ್ತಿಗಳ ತೇಜೋವಧೆಗೆ ಈ ಕಾನೂನು ಬಳಕೆ ಯಾಗುವ ಸಾಧ್ಯತೆಯಿದೆ’ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಆಯೋಗ ದ ಸದಸ್ಯರೊಬ್ಬರು, ‘ದೂರು ಸಲ್ಲಿಸಲು ಆಗಮಿಸುವವ
ರ ವರ್ತನೆ ಗಮನಿಸಿಯೇ ಪ್ರಕರಣ ನೈಜ ಎಂಬುದನ್ನು ಪೊಲೀಸರು ಅರ್ಥೈಸಿಕೊಳ್ಳುತ್ತಾರೆ.
ಆದರೆ, ಆನ್‌ಲೈನ್ ನಲ್ಲಿ ಎಫ್‌ಐಆರ್ ದಾಖಲಿಗೆ ಅವಕಾಶ ಕಲ್ಪಿಸಿದರೆ ಯಾರು ಬೇಕಾದರೂ, ತಮಗೆ ಆಗದವರ ತೇಜೋವಧೆ ಗಾಗಿ ದುರುಪಯೋಗಪಡಿಸಿ ಕೊಳ್ಳಬಹುದು ಎಂಬುದ ನ್ನು ಅರ್ಥೈಸಿಕೊಂಡಿದ್ದೇವೆ. ಹೀಗಾಗಿ, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿಲ್ಲ,’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.