
ಬೆಂಗಳೂರು (ಆ.29): ರಾಜ್ಯದ ಹಾಲಿ ಇರುವ 177 ತಾಲೂಕುಗಳ ಪಟ್ಟಿಗೆ ಹೊಸದಾಗಿ ವಿವಿಧ 27 ಜಿಲ್ಲೆಗಳ ಒಟ್ಟು 49 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹೊಸದಾಗಿ ರಚನೆಯಾಗಲಿರುವ ತಾಲೂಕುಗಳ ಗಡಿ ಗುರುತಿಸುವ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ವರದಿ ಪಡೆದ ನಂತರ ಶೀಘ್ರ ಹೊಸ ತಾಲೂಕುಗಳ ರಚನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ರಚನೆಯಾಗಲಿರುವ ಹೊಸ ತಾಲೂಕುಗಳ ಪಟ್ಟಿ ಇಂತಿವೆ:
ಬಾಗಲಕೋಟೆ-ಗುಳೇದಗುಡ್ಡ, ರಬಕವಿ-ಬನಹಟ್ಟಿ, ಇಳಕಲ್ಲ
ಬೆಳಗಾವಿ-ನಿಪ್ಪಾಣಿ, ಮೂಡಲಗಿ, ಕಾಗವಾಡ
ಚಾಮರಾಜನಗರ- ಹನೂರು
ದಾವಣಗೆರೆ-ನ್ಯಾಮತಿ
ಬೀದರ್-ಚಿಟಗುಪ್ಪ, ಹುಲಸೂರು, ಕಮಲಾನಗರ
ಬಳ್ಳಾರಿ-ಕುರುಗೋಡು, ಕೊಟ್ಟೂರು, ಕಂಪ್ಲಿ
ಧಾರವಾಡ-ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
ಗದಗ-ಗಜೇಂದ್ರಗಡ, ಲಕ್ಷ್ಮೇಶ್ವರ
ಕಲಬುರಗಿ-ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಬಾದ್
ಯಾದಗಿರಿ-ಹುಣಸಗಿ, ವಡಗೆರೆ, ಗುರುಮಿಟ್ಕಲ್
ಕೊಪ್ಪಳ-ಕುಕನೂರು, ಕನಕಗಿರಿ, ಕಾರಟಗಿ
ರಾಯಚೂರು-ಮಸ್ಕಿ, ಸಿರವಾರ
ಉಡುಪಿ-ಬ್ರಹ್ಮಾವರ, ಕಾಪು, ಬೈಂದೂರು
ದಕ್ಷಿಣ ಕನ್ನಡ-ಮೂಡುಬಿದರೆ, ಕಡಬ
ಬೆಂಗಳೂರು ನಗರ-ಯಲಹಂಕ
ವಿಜಯಪುರ-ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರ ಹಿಪ್ಪರಗಿ, ತಾಳಿಕೋಟೆ, ಚಡಚಣ, ಕೊಲ್ಹಾರ
ಹಾವೇರಿ-ರಟ್ಟಿಹಳ್ಳಿ
ಮೈಸೂರು-ಸರಗೂರು
ಚಿಕ್ಕಮಗಳೂರು-ಅಜ್ಜಂಪುರ
ಉತ್ತರ ಕನ್ನಡ-ದಾಂಡೇಲಿ
ಕೋಲಾರ- ಕೆಜಿಎಫ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.