
ಬೆಂಗಳೂರು(ಸೆ.26): ಮನೆಕಳ್ಳತನ, ದರೋಡೆಯಂತ ಕೃತ್ಯಗಳು ಬೆಂಗಳೂರು ನಗರದಲ್ಲಿ ಆಗಾಗ್ಗೆ ನಡೆಯುವುದು ಸಾಮಾನ್ಯ. ಆದರೆ ಇತ್ತೀಚ್ಚೆಗೆ ಮನೆಯಲ್ಲಿ ನಿಲ್ಲಿಸಿದ್ದ ಸೈಕಲ್'ನ್ನೇ ಟಾರ್ಗೆಟ್ ಮಾಡಿ ಸೈಕಲ್'ಗಳನ್ನು ದೋಚುವಂತಹ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಕಳೆದ ತಿಂಗಳಷ್ಟೆ ಬೆಂಗಳೂರಿನ ಮೂಡಲಪಾಳ್ಯದ ಸರ್ಕಲ್'ನಲ್ಲಿ ಖದೀಮರ ತಂಡವೊಂದು ಸೈಕಲ್'ನ್ನ ಕದ್ದು ಪರಾರಿಯಾಗಿತ್ತು, ಇದೀಗ ಅಂತಹದ್ದೇ ಒಂದು ಘಟನೆ ನಗರದ ಹಲಸೂರಿನ ಜೌಳುಪಾಳ್ಯದಲ್ಲಿ ನಡೆದಿದೆ.
ಕಳೆದ 20 ನೇ ತಾರೀಖು ಸುರೇಶ್ ಎಂಬುವವರಿಗೆ ಸೇರಿದ 15 ಸಾವಿರ ಬೆಲೆ ಬಾಳುವ ಸೈಕಲ್'ನ್ನು ಕದ್ದು ಪರಾರಿಯಾಗಿದೆ. ರಮೇಶ್ ಎಂಬುವವರಿಗೆ ಸೇರಿದ ಬಿಲ್ಡಿಂಗ್'ನ ಕೌಂಪೌಡ್'ನಲ್ಲಿ ಸುರೇಶ್ ಎಂದಿನಂತೆ ತಮ್ಮ ಸೈಕಲ್'ನ್ನು ನಿಲ್ಲಿಸಿದ್ದರು. ಇದನ್ನೇ ನೋಡಿಕೊಂಡಿದ್ದ ಖದೀಮರ ತಂಡವೊಂದು ಮುಂಜಾನೆ 5.30 ರ ಸಮಯಕ್ಕೆ ಬೈಕ್'ನಲ್ಲಿ ಬಂದು ಕೌಂಪೌಡ್'ನಲ್ಲಿ ನಿಲ್ಲಿಸಿದ್ದ ಸೈಕಲ್'ನ್ನು ಕದ್ದು ಪರಾರಿಯಾಗಿದ್ದಾರೆ.
ಈ ಖರ್ತಾನಾಕ್ ಕಳ್ಳರ ಕೈಚಳಕ ಅಷ್ಟಕ್ಕೆ ನಿಂತಿಲ್ಲ ಪಕ್ಕದ ರಸ್ತೆಯಲ್ಲಿದ್ದ ಇನ್ನೊಂದು ಮನೆಯಲ್ಲಿ ನಿಲ್ಲಿಸಿದ್ದ ಸೈಕಲ್'ನ್ನೂ ಕದ್ದು ಎಸ್ಕೇಪ್ ಆಗಿದ್ದಾರೆ. ಈ ಖದೀಮರ ಈ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯವಾಳಿಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.