
ಮೈಸೂರು(ಜ.30): ಆಸ್ತಿ ಕಬಳಿಸಲು ಯಡಿಯೂರಪ್ಪರವರ ಆಪ್ತ ಬೆಂಬಲಿಗನೊಬ್ಬ ತನ್ನ ಅಜ್ಜನನ್ನೇ ಅಪಹರಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಮೈಸೂರಿನ ಬಿಎಸ್;ವೈ ಬೆಂಬಲಿಗ ಆಲನಹಳ್ಳಿ ಪುಟ್ಟಸ್ವಾಮಿ ಎಂಬಾತನೇ ಇದೀಗ ಅಪಹರಣ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ. ಅಗ್ರಹಾರ ವೃತ್ತದ ನಿವಾಸಿ ಗುರುಸಿದ್ಧಪ್ಪರವರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಮೇಲೆ ಯಡಿಯೂರಪ್ಪ ಆಪ್ತ ಕಣ್ಣಿಟ್ಟಿದ್ದ.
ಅಗ್ರಹಾರದ ಗಣಪತಿ ದೇಗುಲದ ಎದುರು ಇರುವ ವೃದ್ಧ ಗುರುಸಿದ್ಧಪ್ಪರವರ 1. 5ಕೋಟಿ ಬೆಲೆಬಾಳುವ ಆಸ್ತಿ ಮತ್ತು ಅವರದೇ ಹೆಸರಿನಲ್ಲಿರುವ ಲಕ್ಷ್ಮಿಕಾಂತ್ ಕಾಂಪ್ಲೆಕ್ಸ್'ನ್ನು ಕೂಡಾ ಕಬಳಿಸಲು ಈತ ಹುನ್ನಾರ ನಡೆಸಿದ್ದ. ಇದಕ್ಕಾಗಿ ನಿನ್ನೆ ಮಧ್ಯಾಹ್ನ ಸುಮಾರು 1.30ಕ್ಕೆ ಬೇಬಿ ಆಯಿಷಾ ಆಸ್ಪತ್ರೆಯಿಂದ ವೃದ್ಧನನ್ನು ಇನೋವಾ ಕಾರಿನಲ್ಲಿ ಅಪಹರಿಸಿದ್ದ. ಆದರೆ ಜಗನ್ಮೋಹನ ಅರಮನೆ ಬಳಿ 5 ಖಾಲಿ ಬಾಂಡ್ ಪೇಪರ್'ಗಳಿಗೆ ಯಡಿಯೂರಪ್ಪ ಬೆಂಬಲಿಗ ವೃದ್ಧನಿಂದ ಸಹಿ ಮಾಡಿಸಿದ್ದಾನೆ.
ಸದ್ಯ ಪ್ರಕರಣ ಭೇದಿಸಿರುವ ಪೊಲೀಸರು ಮೈಸೂರಿನ ಎನ್. ಆರ್ ಠಾಣೆಯ ಪೊಲೀಸರು ಬಿಎಸ್'ವೈ ಆಪ್ತ ಬೆಂಬಲಿಗ ಪುಟ್ಟ ಸ್ವಾಮಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.