ಪಿಎಗಳ ಕಿತ್ತಾಟ ಪ್ರಕರಣ: ಹೈಕಮಾಂಡ್'ಗೆ ವರದಿ ಸಲ್ಲಿಸಿದ ಬಿಎಸ್'ವೈ

Published : Jul 20, 2017, 03:24 PM ISTUpdated : Apr 11, 2018, 12:41 PM IST
ಪಿಎಗಳ ಕಿತ್ತಾಟ ಪ್ರಕರಣ: ಹೈಕಮಾಂಡ್'ಗೆ ವರದಿ ಸಲ್ಲಿಸಿದ ಬಿಎಸ್'ವೈ

ಸಾರಾಂಶ

ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಯಡಿಯೂರಪ್ಪ ಹೈಕಮಾಂಡ್ ಗೆ ಮೌಖಿಕ ವರದಿ ನೀಡಿದ್ದಾರೆ. ಪ್ರಕರಣದ ಹಿಂದೆ ಹಲವರ ಕೈವಾಡದ ಇರುವ ಬಗ್ಗೆ ಬಿಎಸ್'ವೈ ಸಂಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.20): ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಯಡಿಯೂರಪ್ಪ ಹೈಕಮಾಂಡ್ ಗೆ ಮೌಖಿಕ ವರದಿ ನೀಡಿದ್ದಾರೆ. ಪ್ರಕರಣದ ಹಿಂದೆ ಹಲವರ ಕೈವಾಡದ ಇರುವ ಬಗ್ಗೆ ಬಿಎಸ್'ವೈ ಸಂಶಯ ವ್ಯಕ್ತಪಡಿಸಿದ್ದಾರೆ.

ನನ್ನ ತೇಜೋವಧೆ ಮಾಡುವ ದುರುದ್ದೇಶ ಇದರ ಹಿಂದಿದೆ ಎಂದಿರುವ ಬಿಎಸ್'ವೈ  ಸರ್ಕಾರದ ಪಿತೂರಿಯ ಬಗ್ಗೆಯೂ ವಿವರ ನೀಡಿದ್ದಾರೆ. ಇದರಿಂದ ಪಕ್ಷದ ಇಮೇಜ್'ಗೆ ಡ್ಯಾಮೇಜ್ ಆಗಲ್ಲ, ಆದರೆ ವೈಯುಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶವಿದೆ ಎಂದು ಮೌಖಿಕವಾಗಿ ಕೆಲ ಹೈಕಮಾಂಡ್ ನಾಯಕರಿಗೆ ಲೋಕಸಭಾ ಅಧಿವೇಶನದ ನಡುವೆ  ಬಿಎಸ್'ವೈ ವರದಿ ನೀಡಿದ್ದಾರೆ.  

ಪ್ರಕರಣದ ಸಂಬಂಧ  ಮೊನ್ನೆಯಷ್ಟೇ ಅಮಿತ್ ಶಾ ವರದಿ ಕೇಳಿದ್ದರು. ಪ್ರಕರಣದ ಬಗ್ಗೆ  ಆರ್'ಎಸ್ಎಸ್ ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.   ಈ ಬೆನ್ನಲ್ಲೇ ಬಿಎಸ್ ವೈ ರಿಂದ ಹೈಕಮಾಂಡ್ ಗೆ ಮೌಖಿಕ ವರದಿ ಸಲ್ಲಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ