
ಲಕ್ನೋ[ಜೂ.24]: ಲೋಕಸಭಾ ಚುನಾವಣಾ ಫಲಿತಾಂಶದಿಂದ ಅಸಮಾಧಾನಗೊಂಡಿರುವ BSP ನಾಯಕಿ ಮಾಯಾವತಿ, ಸೋಮವಾರದಂದು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಮುರಿದುಕೊಂಡಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, SP ಜೊತೆ ಮೈತ್ರಿ ಮುಂದುವರೆಸಿದರೆ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯ. ಹೀಗಾಗಿ ಮುಂದಿನ ಎಲ್ಲಾ ಚುನಾವಣೆಗಳಲ್ಲೂ BSP ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಾರ್ಟಿ ವಿರುದ್ಧ ಕಿಡಿ ಕಾರಿರುವ ಮಾಯಾ '2012 ರಿಂದ 17ರವರೆಗೆ ಸಮಾಜವಾದಿ ಪಾರ್ಟಿ ನೇತೃತ್ವದ ಸರ್ಕಾರ ತೆಗೆದುಕೊಂಡ ದಲಿತ ವಿರೋಧಿ ನಿರ್ಧಾರ, ಕಾರ್ಯಕ್ರಮಗಳನ್ನು ಕಡೆಗಣಿಸಿದೆವು. ಹಳೆಯದನ್ನೆಲ್ಲ ಮರೆತು ಸಮಾಜವಾದಿ ಪಾರ್ಟಿ ಜತೆ ಮೈತ್ರಿ ಮಾಡಿಕೊಂಡೆವು. ಇಷ್ಟೇ ಅಲ್ಲದೇ ದೇಶದ ಹಾಗೂ ಜನ ಹಿತಕ್ಕಾಗಿ ಸಮಾಜವಾದಿ ಪಾರ್ಟಿ ಜೊತೆಗಿನ ಮೈತ್ರಿ ಧರ್ಮಕ್ಕೆ ನಾವು ಬದ್ಧರಾಗಿ ನಡೆದುಕೊಂಡೆವು'
ಆದರೆ ಲೋಕಸಭಾ ಚುನಾವಣೆಯ ಬಳಿಕ ಸಮಾಜವಾದಿ ಪಾರ್ಟಿ ನಾಯಕರ ವರ್ತನೆ ನೋಡಿದರೆ, ಇನ್ನು ನಾವು ಮೈತ್ರಿ ಮುಂದುವರೆಸಿದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಪಕ್ಷ ಹಾಗೂ ಸಂಘಟನೆಯ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ನಾವು ಏಕಾಂಗಿಯಾಗಿ, ನಮ್ಮ ಸ್ವಂತ ಶಕ್ತಿಯಿಂದ ಸ್ಪರ್ಧಿಸುತ್ತೇವೆ ಎಂದಿದ್ದಾರೆ.
ಬಿಎಸ್ಪಿ ಮೈತ್ರಿಗೆ ಎಸ್‌ಪಿ ವಿದಾಯ: 2020ಕ್ಕೆ ಏಕಾಂಗಿ ಹೋರಾಟ!
ಈ ಮೂಲಕ ಮಾಯಾವತಿ ಸಮಾಜವಾದಿ ಪಕ್ಷಚದ ಜೊತೆಗಿನ ಮೈತ್ರಿಗೆ ವಿದಾಯ ಹಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಸುದ್ದಿಗೋಷ್ಟಿಯೊಂದನ್ನು ನಡೆಸಿ '2022ರಲ್ಲಿ ತನ್ನ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಈಗಿಂದಲೇ ತೊಡಗಿಕೊಳ್ಳಬೇಕಿದೆ' ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದರು ಎಂಬುವುದು ಉಲ್ಲೇಖನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.