
ದಾವಣಗೆರೆ(ಸೆ. 19) ಕೋಡಿ ಮಠದ ಶ್ರೀಗಳ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಗಳು ಹೇಳಿದಂತೆ ಮಧ್ಯಂತರ ಚುನಾವಣೆ ಬರಲ್ಲ. ಪೂರ್ಣ ಅವಧಿ ಮುಗಿಸುತ್ತೇವೆ. ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಅವರ ಭವಿಷ್ಯವಾಣಿಯಂತೆ ಚುನಾವಣೆ ಬಂದರೆ ಬರಲಿ. ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಯಾವತ್ತೂ ಚುನಾವಣೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ.
ಚುನಾವಣೆ ಬಗ್ಗೆ ಕೋಡಿ ಶ್ರೀ ಭವಿಷ್ಯ : ಕೆಲವೇ ತಿಂಗಳಿದ್ಯಾ ಸರ್ಕಾರದ ಆಯುಷ್ಯ?
ಈ ಹೇಳಿಕೆ ನೀಡುವ ಮುಖೇನ ಬಿಜೆಪಿ ಚುನಾವಣೆಗೆ ಸಿದ್ಧವಿದೆ ಎಂಬುದನ್ನು ಹಿರಿಯ ನಾಯಕರೇ ಹೇಳಿದ್ದಾರೆ. ಒಂದು ಕಡೆ ರಾಜೀನಾಮೆ ಕೊಟ್ಟು ಅನರ್ಹಗೊಂಡಿರುವ 17 ಸ್ಥಾನಗಳ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದರೆ ಕಾಂಗ್ರೆಸ್ ಎಲ್ಲ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದು ಸಿದ್ದರಾಮಯ್ಯ ರಾಜ್ಯ ಪ್ರವಾಸ ಮಾಡುತ್ತಲೇ ಇದ್ದಾರೆ.
ಸದ್ಯ ಹದಿನಾಲ್ಕು, ಹದಿನೈದು ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ, ಬಿತ್ತಿದ ಬೆಳೆ ಪೈರು ಕೊಯ್ದಾರು, ಬೆಳೆವೊಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳುತ್ತಾರೆ ಎಂದು ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. ಈ ಹೇಳಿಕೆ ಚುನಾವಣೆ ಪೂರ್ವದಲ್ಲಿ ನುಡಿದಿದ್ದೆ ಇನ್ನು ಕೆಲವೆ ದಿನ ಕಾಲಾವಕಾಶ ಇದೆ ಎಂದು ಕೋಡಿ ಮಠದ ಸ್ವಾಮೀಜಿ ಹೇಳಿದ್ದರು. ಆಹೇಳಿಕೆಗೆ ಈಶ್ವರಪ್ಪ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.